ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋ ಕರುಗಳ ಮಾಂಸ ತುಂಬಿದ್ದ ವಾಹನವನ್ನು ಹಿಂದೂ ಕಾರ್ಯಕರ್ತ ಎನ್ನಲಾದ ಪುನೀತ್ ಕೆರೆಹಳ್ಳಿ ತಂಡ ತಡೆದಿದ್ದು, ವಾಹನವನ್ನು ಬಾಗಲಗುಂಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಾಹನದಲ್ಲಿ ಮಾಗಡಿ ತಾಲೂಕಿನ ಕುದೂರು ಬಳಿಯ ಎಸ್‌ಎ ಲಾಯ್ ಕಸಾಯಿಖಾನೆಯಿಂದ ಬೆಂಗಳೂರಿನ ಶಿವಾಜಿನಗರದತ್ತ 40 ಕರುಗಳ ಮಾಂಸವನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ವಾಹನ ತಡೆದ ನಂತರ ಸ್ಥಳಕ್ಕೆ ಬಂದ ಬಾಗಲಗುಂಟೆ ಪೊಲೀಸರು ಮಾಂಸ ಸಮೇತ ಇಬ್ಬರನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.
ಪಶುವೈದ್ಯರು ಮಾಂಸ ಪರೀಕ್ಷೆ ನಡೆಸಿದ್ದು, ಪರಿಶೀಲನೆಯ ಬಳಿಕ ಕಾನೂನಿನ ಪ್ರಕಾರ ವಿಲೇವಾರಿ ಮಾಡಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ, ಪುನೀತ್ ಕೆರೆಹಳ್ಳಿ ತಂಡದವರು ವಾಹನದಲ್ಲಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.