ದೇಶದಲ್ಲಿ ಈವರೆಗೆ 1.48 ಕೋಟಿ ಜನರಿಗೆ ಕೋವಿಡ್ ಲಸಿಕೆ

ದೇಶದಲ್ಲಿ ಈವರೆಗೆ 1.48 ಕೋಟಿ ಜನರಿಗೆ ಕೋವಿಡ್ ಲಸಿಕೆ

ನವದೆಹಲಿ, ಮಾರ್ಚ್ 2 – ದೇಶದಲ್ಲಿ ಈವರೆಗೆ ಒಂದು ಕೋಟಿ 48 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೋವಿಡ್ -19 ಚೇತರಿಕೆ ಪ್ರಮಾಣ ಶೇ 97.07 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ, 12 ಸಾವಿರದ 464 ಜನರು ಚೇತರಿಸಿಕೊಂಡಿದ್ದು, ಇದರೊಂದಿಗೆ ಈವರೆಗೆ ಗುಣಮುಖರಾದವರ ಸಂಖ್ಯೆ ಒಂದು ಕೋಟಿ 7 ಲಕ್ಷದ 68 ಸಾವಿರಕ್ಕೆ ಏರಿದೆ.

ದೇಶಾದ್ಯಂತ ಕಳೆದ 24 ತಾಸಿನಲ್ಲಿ 12 ಸಾವಿರದ 286 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1.11 ಕೋಟಿಗೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 91 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

,

Leave a Reply

Your email address will not be published. Required fields are marked *