ಸತತ 19ನೇ ದಿನವೂ ಮುಂದುವರೆದ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

ನವದೆಹಲಿ: ನಿರಂತರವಾಗಿ ಏರಿಕೆಯಾಗುತ್ತಿರುವ ಇಂಧನ ದರದಲ್ಲಿ ಗುರುವಾರ ಮತ್ತೆ ಹೆಚ್ಚಳವಾಗಿದ್ದು, ಪೆಟ್ರೋಲ್‌, ಡೀಸೆಲ್ ಕ್ರಮವಾಗಿ 16 ಪೈಸೆ ಮತ್ತು 14 ಪೈಸೆ ಏರಿಕೆಯಾಗಿದೆ.

ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಈಗ ₹0.14ರಷ್ಟು ಮತ್ತು ಪೆಟ್ರೋಲ್ ಬೆಲೆ ₹0.16 ರಷ್ಟು ಹೆಚ್ಚಳವಾಗಿದೆ. ಸದ್ಯ ಬೆಂಗಳೂರಿನಲ್ಲಿ ಡೀಸೆಲ್‌ ಬೆಲೆ ₹75.96 ಮತ್ತು ಪೆಟ್ರೋಲ್‌ ಬೆಲೆ ₹82.35ಕ್ಕೆ ತಲುಪಿದೆ.

ದೆಹಲಿಯಲ್ಲಿ ಡೀಸೆಲ್‌ ದರ ₹80.02 ಮತ್ತು ಪೆಟ್ರೋಲ್‌ ದರ ₹79.92ಕ್ಕೆ ಏರಿಕೆಯಾಗಿದೆ. ಇತ್ತ ಮುಂಬೈನಲ್ಲಿ ಡೀಸೆಲ್‌ ದರ ₹77.76 ಮತ್ತು ಪೆಟ್ರೋಲ್‌ ದರ ₹86.54 ಹೆಚ್ಚಳವಾಗಿದೆ.

ಈ ತಿಂಗಳ 7ರಿಂದ ಆರಂಭವಾದ ಇಂಧನಗಳ ದಿನನಿತ್ಯದ ಬೆಲೆ ಪರಿಷ್ಕರಣೆಯು ಸತತ 19 ದಿನವೂ ಮುಂದುವರೆದಿದೆ.

Leave a Reply

Your email address will not be published. Required fields are marked *