ಇಂದು 29 ಮಂದಿ ಸಚಿವರು ಪ್ರಮಾಣ ವಚನ, ಈ ಭಾರಿ ಡಿಸಿಎಂ ಹುದ್ದೆ ಇರುವುದಿಲ್ಲ; ಸಿಎಂ ಬೊಮ್ಮಾಯಿ

ಇಂದು 29 ಮಂದಿ ಸಚಿವರು ಪ್ರಮಾಣ ವಚನ, ಈ ಭಾರಿ ಡಿಸಿಎಂ ಹುದ್ದೆ ಇರುವುದಿಲ್ಲ; ಸಿಎಂ ಬೊಮ್ಮಾಯಿ

 

ಬೆಂಗಳೂರು,ಆ.4 ಯಾವುದೇ ಒತ್ತಡವಿಲ್ಲದೇ ಸಂಪುಟ ರಚನೆಯಾಗಿದ್ದು, ಡಿಸಿಎಂ ಸ್ಥಾನ ಇರದೇ 29 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸಿಎಂ ಬಸವರಾಜಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ಬೊಮ್ಮಾಯಿ,ವಿಧನಾಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಪುಟ ರಚನೆ ಬಗ್ಗೆ ಮಾಹಿತಿ ನೀಡಿದರು.
29 ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಈ ಪೈಕಿ ಮೂರು ದಲಿತ, ಒಂದು ಎಸ್ ಟಿ,ಏಳು ಒಬಿಸಿ
ಎಂಟು ಲಿಂಗಾಯತ,ಏಳು ಒಕ್ಕಲಿಗರಿಗೆ ಸಂಪುಟದಲ್ಲಿ ಸ್ಥಾನಕಲ್ಪಿಸಲಾಗಿದೆ ಎಂದ ಬೊಮ್ಮಾಯಿ,ಬಿ‌.ವೈ ವಿಜಯೇಂದ್ರ ಅವರ ಹೆಸರು ರಾಜ್ಯಪಾಲರಿಗೆ ಕಳುಹಿಸಿರುವ ಪಟ್ಟಿಯಲ್ಲಿ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಿಎಂ ಸ್ಪಷ್ಟಪಡಿಸಿದರು.

 

, ,

Leave a Reply

Your email address will not be published. Required fields are marked *