ಲಸಿಕೆ ಪಡೆಯಲು ಸಂಚರಿಸುತ್ತಿರುವವರುಸೂಕ್ತ ದಾಖಲೆ ತೋರಿಸತಕ್ಕದ್ದು: ಕಮಲ್ ಪಂತ್

ಲಸಿಕೆ ಪಡೆಯಲು ಸಂಚರಿಸುತ್ತಿರುವವರುಸೂಕ್ತ ದಾಖಲೆ ತೋರಿಸತಕ್ಕದ್ದು: ಕಮಲ್ ಪಂತ್

ಬೆಂಗಳೂರು, ಮೇ 13  ಕೊರೊನಾ ಎರಡನೇ ಅಲೆ ನಿಯಂತ್ರಿಸಲು ಜಾರಿಯಾಗಿರುವ ಲಾಕ್ ಡೌನ್ ಅನ್ನು ಯಶಸ್ವಿಗೊಳಿಸಲು ನಗರ ಪೊಲೀಸರು ಹರಸಾಹಸಪಡುತ್ತಿದ್ದಾರೆ.
ಬೆಳಿಗ್ಗೆ 10 ಗಂಟೆ ಬಳಿಕ ಸರ್ಕಾರಿ, ವೈದ್ಯಕೀಯ ಸಿಬ್ಬಂದಿ ಸೇರಿ ಕೆಲವರಿಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಲಸಿಕೆ ಪಡೆಯಲು ಸಂಚರಿಸುತ್ತಿರುವವರಿಗೆ ಅನುವು ಮಾಡಿಕೊಡಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಿಬ್ಬಂದಿ ಗೆ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆಯುಕ್ತರು, ಲಸಿಕೆ ಪಡೆಯಲು ಸಂಚರಿಸುತ್ತಿರುವವರ ಬಳಿ ಸೂಕ್ತ ದಾಖಲೆಗಳು ಇದ್ದಲ್ಲಿ ಅನುವು ಮಾಡಿಕೊಡಬೇಕು ಎಂದು ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಪೊಲೀಸ್ ಕೇಳಿದರೆ ಸಾರ್ವಜನಿಕರು ಲಸಿಕೆ ಪಡೆಯುತ್ತಿರುವುದರ ಕುರಿತ ಎಸ್ ಎಂಎಸ್ /ರಸೀದಿ/ಆನ್ಲೈನ್ ದಾಖಲೆ ಮುಂತಾದವನ್ನು ತೋರಿಸತಕ್ಕದ್ದು ಎಂದು ಆಯುಕ್ತರು ಖಡಕ್ ಸೂಚನೆ ನೀಡಿದ್ದಾರೆ.
ಮನೆಯಲ್ಲೇ ಇರಿ, ಸುರಕ್ಷಿತವಾಗಿ ಇರಿ ಎಂದು ಆಯುಕ್ತರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

, , ,

Leave a Reply

Your email address will not be published. Required fields are marked *