ರಾಜಕೀಯಕ್ಕೆ ಬರುವ ಚಿಂತನೆ ಇಲ್ಲ; ಉದ್ಯಮಿ ಕೆ.ಎಂ.ಉದಯ್

ರಾಜಕೀಯಕ್ಕೆ ಬರುವ ಚಿಂತನೆ ಇಲ್ಲ; ಉದ್ಯಮಿ ಕೆ.ಎಂ.ಉದಯ್

ಮದ್ದೂರು: ರಾಜಕೀಯಕ್ಕೆ ಬರುವ ಚಿಂತನೆ ಇಲ್ಲ. ಸಮಾಜಸೇವೆ ಮಾಡುವುದೇ ನನಗೆ ಆತ್ಮತೃಪ್ತಿ ತಂದಿದೆ ಎಂದು ಸಮಾಜ ಸೇವಕ ಹಾಗೂ ಉದ್ಯಮಿ ಕೆ.ಎಂ.ಉದಯ್ ತಿಳಿಸಿದರು. ಇಂದು
ಪಟ್ಟಣದ ಗಾಂಧಿ ಪಾರ್ಕ್ ನಲ್ಲಿ ಅಂದಾಜು 75 ಮನೆಗಳಿಗೆ ಹೆಲ್ತ್ ಆರೋಗ್ಯ ಕಿಟ್ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ರಾಜಕೀಯಕ್ಕೆ ಬರಬೇಕು ಎನ್ನುವ ಉದ್ದೇಶದಿಂದ ನಾನು ಸಮಾಜ ಸೇವೆಯನ್ನ ಮಾಡುತ್ತಿಲ್ಲ ನನ್ನ ಆತ್ಮತೃಪ್ತಿಗಾಗಿ ಈ ಸೇವೆಯನ್ನ ಮಾಡುತ್ತಿದ್ದು, ಇದಕ್ಕೆ ಬೇರೆ ಅರ್ಥ ಕಲ್ಪಿಸಬಾರದು ಎಂದು ತಿಳಿಸಿದರು.
ಕರೋನಾ 2 ನೇ ಅಲೆಯಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿರುವುದರಿಂದ  ಸಾಕಷ್ಟು ಜನರು ಆತಂಕಕ್ಕೆ ಮತ್ತು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ವೈಯುಕ್ತಿ ಖಚರ್ಿನಲ್ಲಿ ಫುಡ್ ಕಿಟ್ ಮತ್ತು ಹೆಲ್ತ್ಕಿಟ್ಗಳನ್ನು ವಿತರಿಸುವ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ನನ್ನ ಕೈಲಾದಸಹಾಯ ಮಾಡುತ್ತಿದ್ದೇನೆ. ಪ್ರತಿಯೊಬ್ಬರು ಸಹಾಯ ಮಾಡುವ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ಅನುಕೂಲ ಕಲ್ಪಿಸಬೇಖೆಂದು ತಿಳಿಸಿದರು.
ಪುರಸಭಾ ಸದಸ್ಯ ಮನೋಜ್, ಶಿಂಷಾ ಸಹಕಾರ ಬ್ಯಾಂಕ್ನ ನಿದರ್ೇಶಕ ಸತೀಶ್, ಮುಖಂಡರಾದ ಸೀಪಾಯಿ ಶ್ರೀನಿವಾಸ್, ಕೊತ್ತನಹಳ್ಳಿ ಶಿವಣ್ಣ ಸೇರಿದಂತೆ ಹಲವರು ಹಾಜರಿದ್ದರು.

Leave a Reply

Your email address will not be published. Required fields are marked *