ಎಲ್ಲದರಲ್ಲಿಯೂ ತಪ್ಪು ಹುಡುಕುವವರಿಗೆ ಔಷಧಿಯಿಲ್ಲ: ಸಿ.ಟಿ.ರವಿ

ಎಲ್ಲದರಲ್ಲಿಯೂ ತಪ್ಪು ಹುಡುಕುವವರಿಗೆ ಔಷಧಿಯಿಲ್ಲ: ಸಿ.ಟಿ.ರವಿ

ಬೆಂಗಳೂರು,ಏ.21 ಎಲ್ಲದರಲ್ಲಿಯೂ ತಪ್ಪು ಹುಡುಕುವವರಿಗೆ ಔಷಧಿಯಿಲ್ಲ.ಯಾವಾಗ ರಾಜಕಾರಣ ಮಾಡಬೇಕು ಎಂಬ ಪರಿಜ್ಙಾನವೂ ವಿಪಕ್ಷ ನಾಯಕರಿಗೆ ಇದ್ದಂತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟಿ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು 4 ಸಾವಿರಕ್ಕೂ ಹೆಚ್ಷು ಲ್ಯಾಬ್ ಗಳಿವೆ.1 ಕೋಟಿ 34 ಲಕ್ಷ ಹೆಚ್ಚು ಸೋಂಕಿತರು ಇದ್ದಾರೆ.86 ಸಾವಿರ ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.ಪ್ರಧಾನಿ ಮೋದಿ ವ್ಯಾಕ್ಸಿನ್ ಸಿದ್ಧತೆ ಮಾಡಿಸಿಕೊಟ್ಟಿದ್ದಾರೆ. ಆಮದು ಮಾಡಿ ತುರ್ತು ವ್ಯಾಕ್ಸಿನ್ ಅನ್ನು ರೈಲಿನ ಮೂಲಕ ಸಾಗಿಸಿ ನೀಡಲಾಗುತ್ತಿದೆ.ಇದೆಲ್ಲ ವಿಪಕ್ಷದವರಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯಪಾಲರು ಸಭೆ ಕರೆದರೂ ರಾಜಕೀಯ ಅದೇ ದೃಷ್ಟಿಯಿಂದ ನೋಡುತ್ತಾರೆ.ಉತ್ತಮ ದೃಷ್ಠಿಯಿಂದ ರಾಜ್ಯಪಾಲರು ಸಲಹೆ ಕೊಟ್ಟಿದ್ದಾರೆ.ರಾಜಕಾರಣವನ್ನ ಮಾಡಬೇಕು.ಆದರೆ ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿಅಲ್ಲ.ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಶಿವಸೇನೆ ಸರ್ಕಾರವಿದೆ.ಕೇರಳದಲ್ಲಿ ಎಡಪಕ್ಷಗಳ ಸರ್ಕಾರವಿದೆ.ಎಲ್ಲಾ ರಾಜ್ಯಗಳ ವೈಫಲ್ಯ ಒಂದೇ ದೃಷ್ಟಿಯಲ್ಲಿ ನೋಡಬೇಕು.ಅದೇ ರೀತಿ ಯಶಸ್ಸನ್ನೂ ಸಹ ಒಂದೇ ರೀತಿ ನೋಡಬೇಕು.ಕರ್ನಾಟಕವನ್ನು ಮಾತ್ರ ಬೇರೆ ರೀತಿ ಪರಿಗಣಿಸುವುದೇಕೆ? ಎಂದು ಸಿ.ಟಿ.ರವಿ ಪ್ರಶ್ನಿಸಿದರು.

ಆರ್.ಟಿ.ಪಿ.ಸಿ.ಆರ್ ಫಲಿತಾಂಶ ತಡವಾಗಿ ಬರುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, ಲ್ಯಾಬ್ ಗಳ ಸಂಖ್ಯೆಯನ್ನು ಹೆಚ್ಚಿಸಬೇಕೇ?ಖಾಸಗಿ ಲ್ಯಾಬ್ ಗಳನ್ನೂ ಸರ್ಕಾರ ವಶಕ್ಕೆ ಪಡೆಯಬೇಕೇ?ಬೇಡವೇ ಎಂಬ ಬಗ್ಗೆ ತಜ್ಙರ ಸಲಹೆಯಂತೆ ನಡೆದುಕೊಳ್ಳಬೇಕು.ಆಗ ಟೆಸ್ಟಿಂಗ್ ಪ್ರಮಾಣ ಹೆಚ್ಚಳವಾಗಲಿದೆ.ಪರೀಕ್ಷಾ ಫಲಿತಾಂಶ ಕೂಡ ಬೇಗ ಸಿಗಲಿದೆ.ಆದರೆ ಇಂದು ಶೇ 99 ರಷ್ಟು ಗುಣಮುಖರ ಸಂಖ್ಯೆಯಿದ್ದು,ಶೇ.1 ರಷ್ಟು ಮಾತ್ರ ಸಾವಿನ ಪ್ರಮಾಣವಿದೆ.ಬೆಡ್ ಗಳ ಕೊರತೆ ಇರುವುದು ನಿಜ. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ.ಆಕ್ಸಿಜನ್ ಕೊರತೆ ನೀಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ.ಪರೀಕ್ಷಾ ಫಲಿತಾಂಶ ಬೇಗ ಬರುವ ರೀತಿ ಸರ್ಕಾರ ನೋಡಿಕೊಳ್ಳಲೇಬೇಕು ಎಂದು ಸಿ.ಟಿ.ರವಿ ಹೇಳಿದರು.

, ,

Leave a Reply

Your email address will not be published. Required fields are marked *