ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕ ಶೇಕಡಾ ೫ ರಷ್ಟು ಇಳಿಕೆ

ನವದೆಹಲಿ, ಜುಲೈ ೧ ಖಾದ್ಯ ತೈಲ ಬೆಲೆಗಳನ್ನು ಕಡಿಮೆ ಮಾಡಲು ಮತ್ತು ಗ್ರಾಹಕರಿಗೆ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ, ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕವನ್ನು ಶೇಕಡಾ ೫ ರಷ್ಟು ಕಡಿಮೆ ಮಾಡಿದೆ.ಅಲ್ಲದೇ, ಆರ್ಬಿಡಿ ಪಾಮೋಲಿನ್ ಅಥವಾ ಸಂಸ್ಕರಿಸಿದ ತಾಳೆ ಎಣ್ಣೆಯ ಬೆಲೆಯನ್ನು ತಗ್ಗಿಸಲು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಆಮದಿನ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ಮತ್ತು ಅದನ್ನು ಮುಕ್ತ ಸಾಮಾನ್ಯ ವರ್ಗದ ಆಮದು ವಿಭಾಗದಲ್ಲಿ ಸೇರಿಸಲು ಶಿಫಾರಸು ಮಾಡಿದೆ.
ದೇಶದಲ್ಲಿ ಬಳಕೆ ಮಾಡುವ ಪ್ರಮುಖ ಖಾದ್ಯ ತೈಲಗಳಲ್ಲಿ, ಸಾಸಿವೆ, ಸೋಯಾಬೀನ್, ನೆಲಗಡಲೆ, ಸೂರ್ಯಕಾಂತಿ ತೆಂಗಿನಎಣ್ಣೆ ಮತ್ತು ತಾಳೆ ಎಣ್ಣೆ ಸೇರಿವೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಆಡಳಿತ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
೨೦೨೧ ರ ಜೂನ್ ೩೦ ರಿಂದ ಜಾರಿಗೆ ಬರುವಂತೆ ಹಣಕಾಸು ಸಚಿವಾಲಯ ಅಧಿಸೂಚನೆಯ ಮೂಲಕ, ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕವನ್ನು ಶೇಕಡ ೧೫ ರಿಂದ ೧೦ಕ್ಕೆ ಇಳಿಸಿದೆ ಮತ್ತು ಇದು ಈ ವರ್ಷ ಸೆಪ್ಟೆಂಬರ್ ೩೦ರವರೆಗೆ ಜಾರಿಯಲ್ಲಿರುತ್ತದೆ.
ಇದರಿಂದಾಗಿ, ತಾಳೆ ಎಣ್ಣೆ ಮೇಲಿನ ಪರಿಣಾಮಕಾರಿ ತೆರಿಗೆ ದರ, ಹಿಂದಿನ ಶೇಕಡ ೩೫.೭೫ ರಿಂದ ಶೇಕಡ ೩೦.೨೫ ಕ್ಕೆ ಇಳಿಕೆಯಾಗಲಿದೆ, ಇದರಲ್ಲಿ ಹೆಚ್ಚುವರಿ ಕೃಷಿ-ಸೆಸ್ ಶೇಕಡ ೧೭.೫ ಮತ್ತು ಸಾಮಾಜಿಕ ಕಲ್ಯಾಣ ಸೆಸ್ ಶೇಕಡ ೧೦ರಷ್ಟು ಸೇರಿದೆ. ಇದರಿಂದಾಗಿ ಬಳಕೆ ಮಾಡುವ ತೈಲಗಳ ಚಿಲ್ಲರೆ ಬೆಲೆಗಳಲ್ಲಿ ಇಳಿಕೆಯಾಗಲಿದೆ.

,

Leave a Reply

Your email address will not be published. Required fields are marked *