ಪಕ್ಷ ಸೂಕ್ತ ಸಂದರ್ಭದಲ್ಲಿ ನನಗೂ ಸೂಕ್ತ ಸ್ಥಾನಮಾನ ನೀಡಲಿದೆ:ಶ್ರೀರಾಮುಲು ಭರವಸೆ

ಪಕ್ಷ ಸೂಕ್ತ ಸಂದರ್ಭದಲ್ಲಿ ನನಗೂ ಸೂಕ್ತ ಸ್ಥಾನಮಾನ ನೀಡಲಿದೆ:ಶ್ರೀರಾಮುಲು ಭರವಸೆ

ಬೆಂಗಳೂರು,ಜೂ.17 ನಮ್ಮ ಪಕ್ಷ ರಾಷ್ಟ್ರೀಯ ಪಕ್ಷ ಸೂಕ್ತ ಸಂದರ್ಭಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದು ನನಗೂ ಸೂಕ್ತ ಸ್ಥಾನಮಾನ ಕೊಡುವ ಭರವಸೆ ಇದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಉಸ್ತುವಾರಿ ಅರುಣ್‌ಸಿಂಗ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮುಲು,ಯಡಿಯೂರಪ್ಪ ಅವರಿಗೆ ಸಿಎಂ ಆಗಿರಲು ಸಾಮರ್ಥ್ಯ ಇದೆ ಎಂದು
ಅರುಣ್ ಸಿಂಗ್ ಜತೆ ಅಭಿಪ್ರಾಯ ಹೇಳಿದ್ದೇನೆ.ಪಕ್ಷ ಸಂಘಟನೆ ಬಗ್ಗೆ ಚರ್ಚೆ ಹಾಗೂ ಜನಪರ ಕಾರ್ಯಮಗಳನ್ನು ಮುಂದುವರೆಸುವ ಬಗ್ಗೆ ಚರ್ಚೆ ನಡೆಸಿದ್ದೇನೆ. ಯಡಿಯೂರಪ್ಪ ಸಿಎಂ ಆಗಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ.ಆದರೆ ವಿಪಕ್ಷಗಳು ಸುಖಾಸುಮ್ಮನೆ ಗೊಂದಲ ಸೃಷ್ಟಿಸುತ್ತಿವೆ‌.ಯಡಿಯೂರಪ್ಪ ಅವರ ಒಳ್ಳೆಯ ಕೆಲಸಗಳು ಜನರಿಗೆ ಶ್ರೀರಕ್ಷೆಯಾಗಿವೆ.ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ವರಿಷ್ಠರು ಹೇಳಿದ್ದಾರೆ.ನಮ್ಮ ಪಕ್ಷ ನನ್ನ ಕೈಬಿಡಲ್ಲ ಎನ್ನುವ ವಿಶ್ವಾಸ ಇದೆ.
ಶಾಸಕರಾದ ಸೋಮಶೇಖರ್ ರೆಡ್ಡಿಯವರೂ ಇದೇ ಹೇಳಿಕೆ ಕೊಟ್ಟಿದ್ದಾರೆ ಎಂದು
ಸಚಿವ ಶ್ರೀರಾಮುಲು ತಿಳಿಸಿದರು.

, , ,

Leave a Reply

Your email address will not be published. Required fields are marked *