ಪುರಸಭೆ ಆಡಳಿತ ಸಂಪೂರ್ಣ ನಿಷ್ಕ್ರಿಯ ಗೊಂಡಿದೆ; ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ. ವಿ. ಗೋವಿಂದರಾಜು

ಪುರಸಭೆ ಆಡಳಿತ ಸಂಪೂರ್ಣ ನಿಷ್ಕ್ರಿಯ ಗೊಂಡಿದೆ; ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ. ವಿ. ಗೋವಿಂದರಾಜು

ಮಧುಗಿರಿ:- ಇಲ್ಲಿನ ಪುರಸಭೆ ಆಡಳಿತ ಸಂಪೂರ್ಣ ನಿಷ್ಕ್ರಿಯ ಗೊಂಡಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ. ವಿ. ಗೋವಿಂದರಾಜು ಗುರುತರವಾಗಿ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಜನಸಾಮಾನ್ಯರ ಹಾಗೂ ಪುರಸಭಾ ಸದಸ್ಯರುಗಳು ಕೆಲಸಗಳನ್ನು ಮಾಡಿ ಕೊಡಲು ಸತಾಯಿಸುತ್ತಿರುವ ಇಲ್ಲಿನ ಅಧಿಕಾರಿ ವರ್ಗ ಕಿಂಚಿತ್ತೂ ಕೆಲಸ ಮಾಡುತ್ತಿಲ್ಲ, ಮಧ್ಯವರ್ತಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ .ಖಾತಾ ಬದಲಾವಣೆ ಮತ್ತು ಖಾತಾ ನಕಲು ಗಳು ಬಿಕರಿಯಾಗುತ್ತಿವೆ. ಪೌರಕಾರ್ಮಿಕರು ಪಟ್ಟಣವನ್ನು ಸ್ವಚ್ಚಗೊಳಿಸುತ್ತಿದ್ದು ಸುಂದರ ನಗರವನ್ನಾಗಿಸಲು ಒಂದೆಡೆ ಪ್ರಯತ್ನ ಮಾಡುತ್ತಿದ್ದರೆ, ಹಂದಿಗಳು ಮತ್ತು ನಾಯಿಗಳು ಹಾವಳಿ ಹೆಚ್ಚಾಗುತ್ತಿದೆ. ಇನ್ನೂ ಕೋಳಿ ಮತ್ತು ಮೀನಿನ ಮಾಂಸದ ತ್ಯಾಜ್ಯಗಳನ್ನು ರಾಜೀವ್ ಗಾಂಧಿ ಕ್ರೀಡಾಂಗಣ ದಲ್ಲಿ ಕತ್ತಲೆಯಲ್ಲಿ ಸುರಿದು ಹೋಗುತ್ತಿರುವುದರಿಂದ ನಾಯಿಗಳ ಉಪಟಳ ಹೆಚ್ಚಾಗಿ ವಾಯುವಿವಾರಕ್ಕೆ ಆಗಮಿಸುತ್ತಿರುವ ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ನಾಯಿಗಳ ಕಾಟದಿಂದ ರಕ್ಷಣೆ ಇಲ್ಲದಂತಾಗಿದೆ.ಯುಜಿಡಿ ಕೆಲಸದಿಂದಾಗಿ ವಾಹನ ಸವಾರರು ಪ್ರಾಣಭಯದಿಂದ ಸಂಚರಿಸುವಂತಾಗಿದೆ.
ಸೊಳ್ಳೆಗಳ ಕಾಟವಂತೂ ಮಿತಿ ಮೀರಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಮುನ್ನವೇ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದು, ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರ ನಡುವೆ ಆಡಳಿತದ ವಿಚಾರವಾಗಿ ಹೊಂದಾಣಿಕೆಯಿಲ್ಲದ ಕಾರಣ ಅಭಿವೃದ್ಧಿ ಕುಂಠಿತ ವಾಗಲು ಕಾರಣವಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಡೂಂಲೈಟ್ ವೃತ್ತದ ಹೈಮಾಸ್ಟ್ ದೀಪವೇ ಸರಿಯಾಗಿ ಉರಿಯುತ್ತಿಲ್ಲ ಎಂದಾದರೆ ವಾರ್ಡುಗಳಲ್ಲಿ ಅದು ಕೊಳಚೆ ಪ್ರದೇಶಗಳಲ್ಲಿನ ಬೀದಿ ದೀಪಗಳ ನಿರ್ವಹಣೆ ಊಹಿಸುವುದು ಕಷ್ಟವಾಗಿದೆ.
ಉಪನೋಂದಾವಣೆ ಕಚೇರಿಯಲ್ಲಿ ಯಾವುದೇ ಆಸ್ತಿ ನೋಂದಾವಣೆ ಯಾಗಬೇಕಾದರೆ ಖಾತಾ ನಕಲು ಅತ್ಯವಶ್ಯಕವಾಗಿ ಬೇಕಾಗುತ್ತದೆ. ಅದರಲ್ಲೂ ಇತ್ತೀಚಿನ ಕಾನೂನಿನ ಪ್ರಕಾರ ಇ – ಖಾತೆ ಇದ್ದರೆ ಮಾತ್ರ ನೋಂದಾವಣೆ ಸಾಧ್ಯ ಆದರೆ ಹಳೆಯ ಖಾತೆಯ ನಕಲು ಗಳಿಂದ ನೋಂದಾವಣೆ ಆಗುತ್ತಿರುವುದು ಈ ರೀತಿ ನಕಲಿ ಖಾತೆಗಳ ಪತ್ರಗಳು ಎಲ್ಲಿಂದ ಹೊರಬರುತ್ತಿದೆ ಎಂಬುದೇ ಅರಿಯದಾಗಿದೆ. ದಳ್ಳಾಳಿಗಳು ಇದರ ಬಗ್ಗೆ ಹೆಚ್ಚಾಗಿದ್ದು ಇದೇ ರೀತಿ ಮುಂದುವರಿದರೆ ಆಡಳಿತ ಯಂತ್ರ ಸಂಪೂರ್ಣ ನೆಲಕಚ್ಚಲಿದೆ ಎಂದು ಎಂ.ವಿ.ಗೋವಿಂದರಾಜು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *