ಬೆಂಗಳೂರು : ಮಾರ್ಚ್ 08 (ಉದಯಕಾಲ) ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ವಿಧ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅವರ ಸಮಸ್ಯೆ ಬಗೆಹರಿಸಬೇಕು ಎಂದು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಹೇಳಿದರು.
ಅವರು ಇಂದು ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಗೆ ತೆರಳಿದ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಸದ್ಯ ಅತಂತ್ರವಾಗಿದೆ, ಯುದ್ದವು ಅವರ ಭವಿಷ್ಯದ ಮೇಲೆ ಪರಿಣಾಮ ಭೀರಿದೆ ಈ ವಿಚಾರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅವರ ಸಮಸ್ಯೆಗಳನ್ನ ಶೀಘ್ರವಾಗಿ ರಾಜೀವ್ ಗಾಂಧಿ ವಿವಿ ಜತೆ ಚರ್ಚೆ ಮಾಡಿ ಸೂಕ್ತ ಪರಿಹಾರ ಮಾಡಬೇಕು ಎಂದರು
ಸದ್ಯ ರಾಜ್ಯದಲ್ಲಿ ನೀಟ್ ನಿಂದ ರಾಜ್ಯದ ವಿಧ್ಯಾರ್ಥಿಗಳಿಗೆ ಅನ್ಯಾಯ ಆಗ್ತಿದೆ, ನಮ್ಮ ರಾಜ್ಯದ ವಿಧ್ಯಾರ್ಥಿಗಳಿಗೆ ಸೀಟ್ ಸಿಕ್ತಿಲ್ಲ ನೀಟ್ ತೆಗೆದುಹಾಕಿ ಸಿಇಟಿ ಮೇಲೆ ಸೀಟ್ ಸಿಗುವಂತೆ ಮಾಡಲಿ ಎಂದು ಜೊತೆಗೆ ನೀಟ್ ಪದ್ದತಿ ನಿಲ್ಲಿಸಿ ಸಿಇಟಿ ಪರೀಕ್ಷೆ ಜಾರಿ ಆಗ್ಲಿ ಎಂದರು ಹೇಳಿದರು.
ನಂತರ ಮಾತನಾಡಿದ ಅವರು ಸಿದ್ದರಾಮಯ್ಯ ಸೋಲಿಸಕ್ಕೆ ಕಾಂಗ್ರೆಸ್ ಲ್ಲಿ ಪ್ಲಾನ್ ನಡೀತಿದೆ ಎಂಬ ಆಶೋಕ್ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಬಗ್ಗೆ ಕಾಳಜಿ ತೋರಿಸಿದ ಆಶೋಕ್ ಗೆ ಧನ್ಯವಾದಗಳು, ಸದ್ಯ ನಮ್ಮಲ್ಲಿ ಯಾವುದೇ ಒಡಕು ಉಂಟಾಗಿಲ್ಲ, ನಾವು ಒಗ್ಗಟ್ಟಾಗಿದ್ದೇವೆ, ಜನಕ್ಕೆ ವಿರೋಧ ಪಕ್ಷದಲ್ಲಿ ಏನಾಗ್ತಿದೆ ಅನ್ನೋದು ಬೇಕಿಲ್ಲ ಬದಲಿಗೆ ಆಡಳಿತ ಪಕ್ಷದಲ್ಲಿ ಏನಾಗ್ತಿದೆ ಅಂತ ನೋಡ್ತಿದ್ದಾರೆ ಎಂದರು.