ಹಾಲು ಒಕ್ಕೂಟದಲ್ಲಿ ನಡೆದಿರುವ ಕಲಬೆರಕೆ ಪ್ರಕರಣಕ್ಕೂ ತಾಲ್ಲೂಕಿನಲ್ಲಿರುವ ಬಿಎಂಸಿ ಕೇಂದ್ರಗಳು ಹಾಗೂ ಕಾರ್ಯದರ್ಶಿಗಳಿಗೂ ಯಾವುದೇ ಸಂಬಂಧವಿಲ್ಲ; ಕಾರ್ಯದರ್ಶಿ ಮುದ್ದುರಾಜು

ಹಾಲು ಒಕ್ಕೂಟದಲ್ಲಿ ನಡೆದಿರುವ ಕಲಬೆರಕೆ ಪ್ರಕರಣಕ್ಕೂ ತಾಲ್ಲೂಕಿನಲ್ಲಿರುವ ಬಿಎಂಸಿ ಕೇಂದ್ರಗಳು ಹಾಗೂ ಕಾರ್ಯದರ್ಶಿಗಳಿಗೂ ಯಾವುದೇ ಸಂಬಂಧವಿಲ್ಲ; ಕಾರ್ಯದರ್ಶಿ ಮುದ್ದುರಾಜು

ಮದ್ದೂರು: ತಾಲ್ಲೂಕಿನ ಗೆಜ್ಜಲಗೆರೆಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಕಲಬೆರಕೆ ಹಾಲಿನ ಪ್ರಕರಣಕ್ಕೂ ತಾಲ್ಲೂಕಿನಲ್ಲಿರುವ ಬಿಎಂಸಿ ಕೇಂದ್ರಗಳು ಹಾಗೂ ಕಾರ್ಯದರ್ಶಿಗಳಿಗೂ ಯಾವುದೇ ಸಂಬಂಧವಿಲ್ಲವೆಂದು ಮದ್ದೂರು ತಾಲ್ಲೂಕು ಹಾಲು ಉತ್ಪಾದಕರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮುದ್ದುರಾಜು ಸ್ಪಷ್ಟ ಪಡಿಸಿದರು.
ಪಟ್ಟಣದ ನೌಕರರ ಕಛೇರಿಯಲ್ಲಿ ಇತ್ತೀಚಿಗೆ ನಿಧನರಾದ ಚಾಮನಹಳ್ಳಿ ಹಾಲು ಪರಿವೀಕ್ಷಕ ಸುರೇಶ್ ಕುಟುಂಬಕ್ಕೆ 10 ಸಾವಿರ ಹಾಗೂ ಛತ್ರದಹೊಸಹಳ್ಳಿ ಹಾಲು ಉತ್ಪಾದಕರ ಸಂಘದ ಕಾರ್ಯದಶರ್ಿ ಬಿರೇಶ್ಕುಮಾರ್ ರವರ ಕುಟುಂಬಕ್ಕೆ 20 ಸಾವಿರ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಗರಣಕ್ಕೆ ಸಂಬಂಧಿಸಿರುವ ಗುತ್ತಿಗೆದಾರರನ್ನ ಬಂಧಿಸಬೇಕು. ಅವರನ್ನ ಕಪ್ಪು ಪಟ್ಟಿಗೆ ಸೇರಿಸುವ ಜೊತೆಗೆ ಅವರಿಂದ ನಷ್ಟವಾಗಿರುವ ಹಾಲು ಉತ್ಪಾದಕರಿಗೆ, ಸಂಘಗಗಳಿಗೆ, ಒಕ್ಕೂಟಕ್ಕೆ ಆಗಿರುವ ನಷ್ಟವನ್ನ ಅವರಿಂದ ಸಂಗ್ರಹಿಸಿ ನೀಡಬೇಕೆಂದು ತಿಳಿಸಿದರು.
ಒಕ್ಕೂಟದಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನ ಅಧಿಕಾರಿಗಳು ಕಂಡುಹಿಡಿದಿರುವುದು ಪ್ರಶಂಸನೀಯ ಸಂಗತಿಯಾಗಿದ್ದು ಹಗರಣಕ್ಕೆ ಸಂಬಂಧ ಪಟ್ಟ ವ್ಯಕ್ತಿಗಳನ್ನ ಕಾನೂನು ಪ್ರಕಾರ ಬಂಧಿಸಿ ಶಿಕ್ಷೆಗೊಳಪಡಿಸಿ ಮುಂದಿನ ದಿನಗಳಲ್ಲಿ ಇಂತಹ ಅವ್ಯವಹಾರ ನಡೆಯದಂತೆ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.
ಸಂಘದ ಅಧ್ಯಕ್ಷ ಕುದುರುಗುಂಡಿ ಸುಧಾಕರ್, ಗೌರವಾಧ್ಯಕ್ಷ ಜವರೇಗೌಡ, ಉಪಾಧ್ಯಕ್ಷ ಕೆಂಪರಾಜು, ಖಜಾಂಚಿ ರವಿ, ರ್ಯತ ಮುಖಂಡ ಕೀಳಘಟ್ಟದ ನಂಜುಂಡಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *