ನನ್ನ ವಿರುದ್ಧ ಆರೋಪ ಸಾಬೀತಾಗದಿದ್ದರೆ, ರೋಹಿಣಿ ಸಿಂಧೂರಿ ಮನೆಯಲ್ಲಿ ಅಡುಗೆ ಮಾಡಿಕೊಂಡು ಇರಬೇಕು; ಸಾ.ರಾ.ಮಹೇಶ್

ನನ್ನ ವಿರುದ್ಧ ಆರೋಪ ಸಾಬೀತಾಗದಿದ್ದರೆ, ರೋಹಿಣಿ ಸಿಂಧೂರಿ ಮನೆಯಲ್ಲಿ ಅಡುಗೆ ಮಾಡಿಕೊಂಡು ಇರಬೇಕು; ಸಾ.ರಾ.ಮಹೇಶ್

ಮೈಸೂರು: ಒಂದು ವೇಳೆ ಕಲ್ಯಾಣ ಮಂಟಪ ಕಟ್ಟಿಸಿದ್ದು ಅಕ್ರಮವಲ್ಲ ಎಂದು ನನ್ನ ಪರ ವರದಿ ಬಂದರೆ ರೋಹಿಣಿ ಸಿಂಧೂರಿಯವರು ತಕ್ಷಣವೇ ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಅವರ ಊರಾದ ಆಂಧ್ರಕ್ಕೇ ಹೋಗಿ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಮಕ್ಕಳನ್ನು ನೋಡಿಕೊಂಡು ಇರಬೇಕು ಎಂದು ಜೆಡಿಎಸ್ ಶಾಸಕ ಸಾ ರಾ ಮಹೇಶ್ ಸವಾಲು ಹಾಕಿದ್ದಾರೆ.

ಇಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಭೂ ಒತ್ತುವರಿ ಆರೋಪ ಮಾಡಿರೋ ಸಿಂಧೂರಿ ವಿರುದ್ಧ ಏಕಾಂಗಿ ಧರಣಿ ನೆಡೆಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ರೋಹಿಣಿ ಸಿಂಧೂರಿಯವರನ್ನು ಎಂದೂ ವರ್ಗಾವಣೆ ಮಾಡಿ ಎಂದು ಹೇಳಿಲ್ಲ, ವರ್ಗಾವಣೆ ಮಾಡಿ ಎಂದು ಹೇಳಿದ್ದೇನೆ ಎಂದರು.

ನಿನ್ನೆ ರೋಹಿಣಿ ಸಿಂಧೂರಿಯವರು ನನ್ನ ವಿರುದ್ಧ ಅಕ್ರಮ ಭೂ ಒತ್ತುವರಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಕಳೆದ 15 ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ನನ್ನ ಮತ್ತು ರೋಹಿಣಿ ಸಿಂಧೂರಿಯವರ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ರಾಜಕಾಲುವೆ ಒತ್ತುವರಿ ಮಾಡಿ ಕಲ್ಯಾಣ ಮಂಟಪ ಕಟ್ಟಿಸಿದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ, ನನ್ನ ಒಡೆತನದಲ್ಲಿರುವ ಕಲ್ಯಾಣ ಮಂಟಪದ ಜಾಗ ಬಗ್ಗೆ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಿ ಸಾಬೀತುಪಡಿಸಲಿ,  ಎಂದು ಸರ್ಕಾರವನ್ನು, ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ, ನನ್ನ ಕಲ್ಯಾಣ ಮಂಟಪ ನಿಯಮ ಉಲ್ಲಂಘಿಸಿದ್ರೆ ರಾಜಕೀಯಕ್ಕೆ ಗುಡ್​ಬೈ ಹೇಳ್ತೀನಿ ಎಂದರು.

, , ,

Leave a Reply

Your email address will not be published. Required fields are marked *