ಟೆನಿಸ್: ಸುಮಿತ್ ನಗಾಲ್ ಗೆ ಜಯ

ಟೆನಿಸ್: ಸುಮಿತ್ ನಗಾಲ್ ಗೆ ಜಯ


ನವದೆಹಲಿ, ಮಾ.2  ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ನಡೆಯುತ್ತಿರುವ ಎಟಿಪಿ ಟೆನಿಸ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತದ ಸುಮಿತ್ ನಾಗಲ್, ಆತಿಥೇಯ ದೇಶದ ನಿಕೋಲಾಸ್ ಕಿಕ್ಕರ್ ಅವರನ್ನು ಮಣಿಸಿದರು.
2 ಗಂಟೆ 12 ನಿಮಿಷಗಳ ಕಾದಾಟದಲ್ಲಿ ಸುಮಿತ್ 2-6 6-2 6-3ರಿಂದ ಅರ್ಜೆಂಟೀನಾದ ನಿಕೋಲಾಸ್ ಕಿಕ್ಕರ್ ವಿರುದ್ಧ ಜಯ ಸಾಧಿಸಿದರು. ಇವರು ಮುಂದಿನ ಸುತ್ತಿನಲ್ಲಿ 100 ನೇ ಶ್ರೇಯಾಂಕದ ಪೋರ್ಚುಗಲ್‌ನ ಜೊವಾವೋ ಸೌಸಾ ವಿರುದ್ಧ ಸ್ಪರ್ಧಿಸಿದ್ದಾರೆ.
ಮೊದಲ ಸೆಟ್ ನಲ್ಲಿ ನಿರಾಸೆ ಅನುಭವಿಸಿದರೂ, ಧೃತಿ ಗೆಡದೆ ಆಡಿದ ಸುಮಿತ್ ಎರಡನೇ ಹಾಗೂ ಮೂರನೇ ಸೆಟ್ ನಲ್ಲಿ ಸಮಯೋಚಿತ ಆಟದ ಪ್ರದರ್ಶನ ನೀಡಿದರು. ಎದುರಾಳಿ ಹಾಕಿದ ಸವಾಲನ್ನು ಮೆಟ್ಟಿ ನಿಂತ, ಭಾರತದ ಸ್ಟಾರ್ ಆಟಗಾರ ಎರಡೂ ಸೆಟ್ ಗಳನ್ನು ಗೆದ್ದು ಬೀಗಿದರು.
ಇನ್ನು ಮೂರನೇ ಸೆಟ್ ನಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿದ ಸುಮಿತ್ 1-1 ರಿಂದ ಸಮಬಲದಲ್ಲಿ ಸಾಗುತ್ತಿದ್ದ ಪಂದ್ಯವನ್ನು ಗೆದ್ದು ಮುನ್ನಡೆ ಸಾಧಿಸಿದರು.

,

Leave a Reply

Your email address will not be published. Required fields are marked *