ತಮಿಳುನಾಡು; ವಿಮಾನ ನಿಲ್ದಾಣಗಳಲ್ಲಿ 9 ಕೆ ಜಿ ಚಿನ್ನ ವಶ; ಒಟ್ಟು 9 ಮಂದಿ ಬಂಧನ

ತಮಿಳುನಾಡು; ವಿಮಾನ ನಿಲ್ದಾಣಗಳಲ್ಲಿ 9 ಕೆ ಜಿ ಚಿನ್ನ ವಶ; ಒಟ್ಟು 9 ಮಂದಿ ಬಂಧನ

ಚೆನ್ನೈ, ಜೂನ್‌ 24 ತಮಿಳುನಾಡಿನ ಎರಡು ವಿಮಾನ ನಿಲ್ದಾಣಗಳಲ್ಲಿ ಕಳ್ಳಸಾಗಾಣಿಕೆ ಮೂಲಕ ಸಾಗಿಸುತ್ತಿದ್ದ ಸುಮಾರು 9 ಕೆಜಿ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ತಿರುಚ್ಚಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರ ತಪಾಸಣೆ ನಡೆಸಿದ ಅಧಿಕಾರಿಗಳು 4.25 ಕೋಟಿ ರೂ.ಗಳ ಮೌಲ್ಯದ 8.5 ಕೆಜಿ ಚಿನ್ನ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅದೇ ರೀತಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 19.75 ಲಕ್ಷ ರೂ ಮೌಲ್ಯದ 465 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಎರಡು ಘಟನೆಗಳಲ್ಲಿ ಒಟ್ಟು ಒಂಬತ್ತು ಮಂದಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ದುಬೈನಿಂದ ತಿರುಚಿ ವಿಮಾನ ನಿಲ್ದಾಣಕ್ಕೆ ಬುಧವಾರ ಬೆಳಿಗ್ಗೆ ವಿಶೇಷ ಇಂಡಿಗೊ, ಏರ್ ಇಂಡಿಯಾ ವಿಮಾನಗಳಲ್ಲಿ ಬಂದ ಪ್ರಯಾಣಿಕರನ್ನು ಕೇಂದ್ರ ವಿಭಾಗದ ಉಪನಿರ್ದೇಶಕ ಸತೀಶ್ ನೇತೃತ್ವದ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದರು. ಆ ಸಮಯದಲ್ಲಿ ಮಹಿಳೆ ಸೇರಿದಂತೆ ಎಂಟು ಮಂದಿ ಪ್ರಯಾಣಿಕರಿಂದ 8.5 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಏತನ್ಮಧ್ಯೆ, ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನ ಜೈನುಲ್ಲಾ ಅಬ್ದೀನ್ (60) ಎಂಬ ವ್ಯಕ್ತಿಯಿಂದ 465 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

 

,

Leave a Reply

Your email address will not be published. Required fields are marked *