yograj singh
ಕಪಿಲ್ ದೇವ್ ಕೊಲ್ಲಲು ಮನೆಗೆ ಹೋಗಿದ್ದೆ: ಯುವರಾಜ್ ಸಿಂಗ್ ತಂದೆ ಶಾಕಿಂಗ್ ಹೇಳಿಕೆ
ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲು ಅವರ ಮನೆಗೆ ಪಿಸ್ತೂಲು ತಗೊಂಡು ಹೋಗಿದ್ದೆ ಎಂದು ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಆಘಾತಕಾರಿ ಹೇಳಿದ್ದಾರೆ. ಸಾಮ್ ದೀಶ್ ಭಾಟಿಯಾಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಹೇಳಿರುವ ಯೋಗರಾಜ್ ಸಿಂಗ್, ನನ್ನನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದು, ಕಪಿಲ್ ದೇವ್ ಅವರ ಮನೆಗೆ ಹೋಗಿ ಅವರ ಹಣೆಗೆ ಗುಂಡಿಟ್ಟು ಕೊಲ್ಲಲು ತೆರಳಿದ್ದೆ ಎಂದಿದ್ದಾರೆ.