Menu

ಕೆಲಸಗಾರರ ಉತ್ಪಾದಕತೆಗಿಂತ ಮಾನವ ಸಂಬಂಧಗಳ ಉತ್ಪಾದಕತೆ ಹೆಚ್ಚಲಿ

‘ಎಷ್ಟೊತ್ತು ಹೆಂಡತಿಯ ಮುಖವನ್ನೆ ನೋಡುತ್ತಾ ಕೂರುತ್ತೀರಿ’ ಎಂದರೆ ಸಹಧರ್ಮಿಣಿಯನ್ನು ಅಂತರಂಗದ ಗೆಳತಿಯಾಗಿ ಕಂಡಿಲ್ಲದ ಒಡಕಿನ ಭಾವ ಪ್ರತಿಮೆಯಾಗುತ್ತದೆ. ಪಂಚೇಂದ್ರಿಯಗಳನ್ನು ಚುರುಕುಗೊಳಿಸಿಕೊಳ್ಳುವ ಮತ್ತೊಂದು ತಾಣ ಮನೆಯೆಂಬುದನ್ನು ಅರಿಯಬೇಕು. ಮುಖ್ಯವಾಗಿ ಮನೆಯೊಳಗಿನ ಅವಳ ಅಗಾಧ ದುಡಿಮೆ ತಿಳಿವಿಗೆ ತಂದುಕೊಳ್ಳುವ ಮುಕ್ತತೆ ಬೇಕು. ಮಡದಿ- ಮಕ್ಕಳು ಮುಂದುವರೆದು ಬಂಧು ಬಳಗ ನೆರೆಹೊರೆ ಸಂಬಂಧಗಳು ದಟ್ಟವಾಗಿ ಸಮಾಜವು ಅಭಿವೃದ್ಧಿಗೆ ಪೂರಕ ಪಠ್ಯವಾಗಿ ಮುಂಚಲನೆಯ ಪಥದಲ್ಲಿ ಚಲಿಸುತ್ತದೆ. ಕುಟುಂಬ ಹಾಗೂ ಉದ್ಯೋಗ ಬೆಸುಗೆಗಳನ್ನು ಉನ್ನತೀಕರಿಸುವುದು ಕೂಡ ಮಾನವ