Thursday, February 06, 2025
Menu

ಮುಟ್ಟಾದಾಗ ಸ್ನಾನ ಮಾಡುವಂತಿಲ್ಲವೆಂದು ಬೇಸತ್ತ ಮಹಿಳೆ ವಿಚ್ಛೇದನಕ್ಕೆ ಅರ್ಜಿ

ಮುಟ್ಟಾದಾಗ ಕೊಠಡಿಯಲ್ಲೇ ಇರಬೇಕು, ಅಪ್ಪಿತಪ್ಪಿಯೂ ಸ್ನಾನ ಮಾಡುವಂತಿಲ್ಲ, ಯಾರನ್ನು ಮುಟ್ಟಿಸಿಕೊಳ್ಳುವಂತಿಲ್ಲ ಎಂಬ ಕಟ್ಟುಪಾಡುಗಳಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಮದುವೆಯನ್ನೇ ಅಂತ್ಯಗೊಳಿಸಿರುವ ಘಟನೆ ಭೋಪಾಲ್​ನಲ್ಲಿ ನಡೆದಿದೆ. ಮನೆಯ ಈ ನಿಯಮಗಳಿಂದ ಬೇಸತ್ತ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪತಿ ಕೂಡ ತಾಯಿ ಹೇಳಿರುವ ಮೂಢನಂಬಿಕೆಗೆ ವಿರೋಧ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಆಕೆ ಬೇಸರಗೊಂಡಿದ್ದಳು, ಪತಿ ಬಳಿ ಹಲವು ಬಾರಿ ತಾಯಿಗೆ ಬುದ್ಧಿವಾದ ಹೇಳುವಂತೆ ಕೇಳಿಕೊಂಡರೂ ಏನು ಪ್ರಯೋಜನವಾಗಿರಲಿಲ್ಲ ಹಾಗಾಗಿ ಆಕೆ ಗಂಡನಿಂದ ಬೇರ್ಪಡುವುದೇ