wifes marriage
ಕುಡುಕ ಗಂಡನಿಂದ ಬೇಸತ್ತು ಪರಸ್ಪರ ಮದುವೆ ಆದ ಪತ್ನಿಯರು!
ಕುಡುಕ ಗಂಡಂದಿರ ಕಿರುಕುಳ ತಾಳಲಾರದೇ ಇಬ್ಬರು ಮಹಿಳೆಯರು ಪರಸ್ಪರ ಮಾದುವೆ ಆದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗಂಡಂದಿರ ಕಿರುಕುಳದಿಂದ ಬೇಸತ್ತ ಕವಿತಾ ಹಾಗೂ ಗುಂಜಾ ಅಲಿಯಾಸ್ ಬಬ್ಲು ಮನೆ ತೊರೆದು ಬಂದು ಗೋರಖ್ ಪುರದ ಡಿಯೊರಾ ಎಂಬಲ್ಲಿ ಕಿರು ಕಾಶಿ ಎಂದೇ ಖ್ಯಾತವಾದ ಶಿವನ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಕುಡಿದು ಬಂದ ಕಿರುಕುಳ ನೀಡುತ್ತಿದ್ದ ಪತಿಯರಿಂದ ಬೇಸತ್ತಿದ್ದ ಕವಿತಾ ಹಾಗೂ ಗುಂಜಾ ಇನ್ ಸ್ಟಾಗ್ರಾಂನಲ್ಲಿ ಪರಸ್ಪರ ಪರಿಚಯ