trade
ಟ್ರಂಪ್ ತೆರಿಗೆ ಅಬ್ಬರಕ್ಕೆ ಪಾತಾಳಕ್ಕೆ ಕುಸಿದ ಭಾರತದ ರೂಪಾಯಿ!
ಹೊಸ ತೆರಿಗೆ ಪದ್ಧತಿ ಜಾರಿ ಘೋಷಿಸುವ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ಸಮರ ಸಾರಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು, ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿದೆ. ಸೋಮವಾರ ಷೇರು ಮಾರುಕಟ್ಟೆ ಆರಂಭಗೊಳ್ಳುತ್ತಿದ್ದಂತೆ ರೂಪಾಯಿ ಮೌಲ್ಯ ಕುಸಿತ ಆರಂಭಿಸಿದ್ದು, ಡಾಲರ್ ಎದುರು ದಾಖಲೆಯ 87.29 ಮೊತ್ತಕ್ಕೆ ರೂಪಾಯಿ ಕುಸಿತ ಕಂಡಿದೆ. ಟ್ರಂಪ್ ಈಗಾಗಲೇ ಚೀನಾ, ಕೆನಡಾ ಹಾಗೂ ಮೆಕ್ಸಿಕೊ ಸೇರಿದಂತೆ ವಿವಿಧ ದೇಶಗಳ