Menu

ಗೋವಾ ಪ್ಯಾರಾಗ್ಲೈಡಿಂಗ್: ಮಹಿಳಾ ಪ್ರವಾಸಿ, ಇನ್​ಸ್ಟ್ರಕ್ಟರ್​ ಸಾವು

ಉತ್ತರ ಗೋವಾದಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತದಲ್ಲಿ ಪ್ಯಾರಾಗ್ಲೈಡಿಂಗ್ ಮಹಿಳಾ ಪ್ರವಾಸಿ ಹಾಗೂ ಇನ್​ಸ್ಟ್ರಕ್ಟರ್​ ಮೃತಪಟ್ಟಿದ್ದಾರೆ. ಶನಿವಾರ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುಣೆ ನಿವಾಸಿ ಶಿವಾನಿ ಡೇಬಲ್ ಮತ್ತು ಆಕೆಯ ಇನ್​ಸ್ಟ್ರಕ್ಟರ್ ಸುಮಲ್ ನೇಪಾಲಿ ಮೃತಪಟ್ಟವರು. ಪ್ಯಾರಾಗ್ಲೈಡಿಂಗ್‌ಗಾಗಿ ಶಿವಾನಿ ಬುಕ್ ಮಾಡಿದ್ದ ಸಾಹಸ ಕ್ರೀಡಾ ಕಂಪನಿಯನ್ನು ಅಕ್ರಮವಾಗಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ಯಾರಾಗ್ಲೈಡರ್ ಟೇಕಾಫ್ ಆದ ತಕ್ಷಣ ಕಂದಕಕ್ಕೆ ಬಿದ್ದು ಇಬ್ಬರೂ ಸ್ಥಳದಲ್ಲೇ ಅಸು ನೀಗಿದ್ದಾರೆ.