Kabini Taraka reservoirs
ಭರ್ತಿಯಾಗುತ್ತಿವೆ ಕಬಿನಿ, ತಾರಕ ಜಲಾಶಯ: ನದಿಪಾತ್ರದ ಜನರಿಗೆ ಸ್ಥಳಾಂತರ ಸೂಚನೆ
ಮೈಸೂರಿನಲ್ಲಿ ಕಬಿನಿ ಹಾಗೂ ತಾರಕ ಜಲಾಶಯಗಳು ಭರ್ತಿಯಾಗಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಕೇರಳದ ವಯನಾಡುವಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ, ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಹೊರ ಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರಿಯಕೆಯಿಂದ ಇರಬೇಕಾಗಿದೆ. ಕಬಿನಿ ಜಲಾಶಯದಿಂದ 10,000ರಿಂದ 15,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುವುದು. ಈ ಪ್ರಮಾಣವು ಹೆಚ್ಚಾಗುವ ಸಾಧ್ಯತೆಯೂ ಇದೆ. ಕಬಿನಿ ನದಿಯ ತಗ್ಗು ಪ್ರದೇಶದಲ್ಲಿರುವ


