jeans factroy
ಬಳ್ಳಾರಿಯ 36 ಜೀನ್ಸ್ ಘಟಕಗಳಿಗೆ ಬೀಗ ಜಡಿದ ಜಿಲ್ಲಾಡಳಿತ!
ಜೀನ್ಸ್ ವಾಷಿಂಗ್ ಘಟಕಗಳಿಂದ ಪರಿಸರಕ್ಕೆ ಹಾನಿ ಆಗುತ್ತದೆ ಎಂಬ ವರದಿ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ಮೇರೆಗೆ ಬಳ್ಳಾರಿಯ 36 ಘಟಕಗಳಿಗೆ ಬೀಗ ಜಡಿಯಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಮರ್ಮಾಘಾತ ಆಗಿದೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಳ್ಳಾರಿ ಜೀನ್ಸ್ ಉದ್ಯಮ ನಂಬಿ 2 ಲಕ್ಷಕ್ಕೂ ಅಧಿಕ ಜನ ಕೆಲಸ ಮಾಡುತ್ತಿದ್ದಾರೆ. ಇದೀಗ ಘಟಕಗಳು ಮುಚ್ಚಿದ್ದರಿಂದ


