Jainism
ಅಹಿಂಸಾ ಪರಮೋಧರ್ಮಃ ಸಂದೇಶ ಸಾರಿದ ಮಹಾವೀರ
ಮಹಾವೀರನು ಬೋಧಿಸಿದ ತ್ರಿರತ್ನಗಳೆಂದರೆ ಸದ್ಭಕ್ತಿ, ಸತ್‌ಕ್ರಿಯೆ, ಸತ್‌ಜ್ಞಾನ. ಮಹಾವೀರನು ಪರಿಪೂರ್ಣ ಮಾನವನಲ್ಲಿ ಕಂಡುಬರುವ ಶಕ್ತಿಯನ್ನು ಅತ್ಯುನ್ನತ ವಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ಆವಿಷ್ಕರಿಸುವುದೇ ದೇವರೆಂದು ಪರಿಗಣಿಸಿದನು. ಅಹಿಂಸೆಯಿಂದ ಬಾಳಬೇಕು. ತನ್ನದಲ್ಲದ್ದನ್ನು ಕದಿಯಬಾರದು. ಸತ್ಯವನ್ನೇ ನುಡಿಯಬೇಕು. ಮಾದಕ ವ್ಯಸನಗಳಿಗೆ ಒಳಗಾಗಬಾರದು. ಪರಿಶುದ್ಧವಾದ ಬದುಕನ್ನು ಸಾಧಿಸಬೇಕು. ಕಠಿಣವಾದ ತಪಸ್ಸನ್ನು ಕೈಗೊಳ್ಳಬೇಕು , ಇವು ಮಹಾವೀರನು ಬೋಧಿಸಿದ ಜೈನಮುನಿಗಳು ಸ್ವೀಕರಿಸಬೇಕಾದ ಪಂಚ ಪ್ರತಿಜ್ಞೆಗಳು. ಭಾರತ ದೇಶದಲ್ಲಿ ಹುಟ್ಟಿ ಬೆಳೆದ ಹಲವು ಧರ್ಮಗಳು ಮಾನವನ ಕಲ್ಯಾಣಕ್ಕೆ


