Jachani Shri
ಅಧ್ಯಾತ್ಮವನ್ನು ಅಂತ್ಯಜರ ಪ್ರಸಾದವನ್ನಾಗಿಸಿದ್ದು ಜಚನಿ ಶ್ರೀ
ಮೇಲಿನವರ ಪಾಂಡಿತ್ಯ ಪ್ರದರ್ಶನಕ್ಕಷ್ಟೇ ಸೀಮಿತವಾಗಿದ್ದ ಅಧ್ಯಾತ್ಮವನ್ನು ಅಂತ್ಯಜರ ಪ್ರಸಾದವನ್ನಾಗಿಸಿದ್ದು ಜಚನಿ ಶ್ರೀಗಳ ಹೆಗ್ಗಳಿಕೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆವಿ ಪ್ರಭಾಕರ್ ಹೇಳಿದರು. ಶ್ರೀ ಜಚನಿ ಅಧ್ಯಯನ ಪೀಠ ಮತ್ತು ಸಂಶೋಧನಾ ಸಂಸ್ಥೆಯ ಪ್ರಾರಂಭೋತ್ಸವದಲ್ಲಿ “ಶಿವ ಸಾಹಿತ್ಯ ಸೂರ್ಯ ಶ್ರೀ ಜಚನಿ” ಕೃತಿಯನ್ನು ಜನಾರ್ಪಣೆಗೊಳಿಸಿ ಮಾತನಾಡಿದರು. ಮನುಷ್ಯರನ್ನು ಮುಟ್ಟಿಸಿಕೊಳ್ಳದ ಚರ್ಮಶುದ್ಧಿಯ ಅಧ್ಯಾತ್ಮದ ಗೊಡ್ಡುತನವನ್ನು ಧಿಕ್ಕರಿಸಿ 1948ರಲ್ಲೇ ದಲಿತ ಸಮುದಾಯಕ್ಕೆ ತಮ್ಮ ಮಠವನ್ನು ಮುಕ್ತಗೊಳಿಸಿದ ಜಚನಿ ಶ್ರೀಗಳು ಸಾಮಾಜಿಕ ಮತ್ತು ಅಂತರಂಗದ ಶುದ್ಧಿಯನ್ನೇ


