Menu

ಹುಬ್ಬಳ್ಳಿಯಲ್ಲಿ ದಲಿತನ ಮದುವೆಯಾದ ಸಿಟ್ಟಿಗೆ ಗರ್ಭಿಣಿ ಮಗಳ ಕೊಲೆಗೈದ ತಂದೆ

ಪ್ರೀತಿಸಿ ಮದುವೆಯಾದ ಮಗಳು ಆರು ತಿಂಗಳ ಗರ್ಭಿಣಿಯಾಗಿರುವಾಗಲೇ ತಂದೆ ಕೊಲೈದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಏಳು ತಿಂಗಳ ಹಿಂದೆ ಮಾನ್ಯ ಪಾಟೀಲ್ ಮತ್ತು ವಿವೇಕಾನಂದ್ ದೊಡ್ಡಮನಿ ಪ್ರೀತಿಸಿ ಮದುವೆಯಾಗಿದ್ದರು. ವಿವೇಕಾನಂದ ದೊಡ್ಡಮನಿ ದಲಿತ ಸಮುದಾಯಕ್ಕೆ ಸೇರಿದ್ದರಿಂದ ಮಾನ್ಯ ಪಾಟೀಲ್ ಕುಟುಂಬಸ್ಥರುಈ ಮದುವೆಯನ್ನು ವಿರೋಧಿಸಿದ್ದರು. ಇದೇ ವಿಚಾರಕ್ಕೆ ಗಲಾಟೆಯಾಗಿ ಎರಡು ಕುಟುಂಬಗಳ ನಡುವೆ ಪೊಲೀಸರು ರಾಜಿ ಪಂಚಾಯ್ತಿ ನಡೆಸಿದ್ದರು. ರಿಜಿಸ್ಟರ್ ಮದುವೆಯಾದ ಬಳಿಕ ಮಾನ್ಯ ಮತ್ತು ವಿವೇಕಾನಂದ್ ಹಾವೇರಿ ಜಿಲ್ಲೆಯಲ್ಲಿ ವಾಸವಾಗಿದ್ದರು.