Indian health sector
ಭಾರತದಲ್ಲಿ 44% ಶಸ್ತ್ರಚಿಕಿತ್ಸೆಗಳು ನಕಲಿ, ಅನಗತ್ಯ ಹಾಗೂ ಹಣಕ್ಕಾಗಿಯೇ ನಡೆಯುವುದು: ಮಾಧ್ಯಮ ಸಂಶೋಧನಾ ವರದಿ
ಭಾರತದ ವೈದ್ಯಕೀಯ ಕ್ಷೇತ್ರವು ತೀವ್ರ ಗತಿಯಲ್ಲಿ ಕುಸಿಯುತ್ತಿದೆ ಎಂಬುದನ್ನು ಸಂಸತ್ತಿನ ಸಮಿತಿಯೇ ಒಪ್ಪಿಕೊಂಡಿದ್ದು, ಬಹುತೇಕ ಈ ಕ್ಷೇತ್ರ ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗದು. Zee News ನಲ್ಲಿ ಪ್ರಕಟವಾದ ಇತ್ತೀಚಿನ ಸಂಶೋಧನಾ ವರದಿಯ ಪ್ರಕಾರ, ಭಾರತದಲ್ಲಿ ನಡೆಯುವ ಒಟ್ಟು ಶಸ್ತ್ರಚಿಕಿತ್ಸೆಗಳಲ್ಲಿ ಸುಮಾರು 44% ಶಸ್ತ್ರಚಿಕಿತ್ಸೆಗಳು ನಕಲಿ, ಅನಗತ್ಯ ಅಥವಾ ಸುಳ್ಳು ಆಗಿವೆ. ನಡೆಯುವ ಅರ್ಧದಷ್ಟು ಶಸ್ತ್ರಚಿಕಿತ್ಸೆಗಳು ರೋಗಿಗಳಿಂದ ಅಥವಾ ಸರ್ಕಾರಿ ವಿಮೆಯಿಂದ ಹಣ ಕಸಿಯಲು ಮಾತ್ರ ನಡೆಯುತ್ತಿವೆ.


