Husband death
ಕೆಮ್ಮಣ್ಣುಗುಂಡಿಯಲ್ಲಿ ಪತ್ನಿ ಜೊತೆ ಸೆಲ್ಫಿ: ಕಾಲು ಜಾರಿ ಕಂದಕಕ್ಕೆ ಬಿದ್ದು ಪತಿ ಸಾವು
ಕೆಮ್ಮಣ್ಣುಗುಂಡಿಯ ಪ್ರವಾಸಿ ತಾಣದ ವೀವ್ ಪಾಯಿಂಟ್ನಲ್ಲಿ ಹೆಂಡತಿಯೊಂದಿಗೆ ಸೆಲ್ಫಿ ತೆಗೆಯಲು ಹೋಗಿ ಗಂಡ ಆಳದ ಪ್ರಪಾತಕ್ಕೆ ಕಾಲು ಜಾರಿ ಬಿದ್ದು ಮೃತಪಟ್ಟಿರುವಂತಹ ಘಟನೆ ನಡೆದಿದೆ. ಶಿಕ್ಷಕರಾಗಿದ್ದ ಸಂತೋಷ್ (40) ಮೃತಪಟ್ಟವರು. ಸಂತೋಷ್ ಮತ್ತು ಹೆಂಡತಿ ಶ್ವೇತ ಕೆಮ್ಮಣ್ಣುಗುಂಡಿ ನೋಡಲು ಬಂದಿದ್ದರು. ಕೆಮ್ಮಣ್ಣುಗುಂಡಿ ಪಾರ್ಕ್ ವೀಕ್ಷಣೆ ಮಾಡಿದ ಬಳಿಕವೀವ್ ಪಾಯಿಂಟ್ ಬಳಿಗೆ ತೆರಳಿ ಸೆಲ್ಫಿ ತೆಗೆಯಲು ಮುಂದಾಗಿದ್ದರು. ಪ್ರಪಾತದ ತುದಿಯಲ್ಲಿ ನಿಂತಿದ್ದ ಸಂತೋಷ್ ಕಾಲು ಜಾರಿ ನೂರಾರು ಅಡಿ ಆಳಕ್ಕೆ ಬಿದ್ದಿದ್ದಾರೆ.


