Menu

ಕರ್ತವ್ಯ ಮುಗಿಸಿ ಮನೆಗೆ ಹೋದ ಎಎಸ್‌ಐ ಕುಸಿದು ಸಾವು

ರಾತ್ರಿ ಕರ್ತವ್ಯ ಮುಗಿಸಿ ಬೆಳಗಿನ ಜಾವ ಮನೆಗೆ ಬಂದ ಎಎಸ್‌ಐವೊಬ್ಬರು ಹೃದಯಾಘಾತದಿಂದ ಕುಸಿದು ಮೃತಪಟ್ಟಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸಂತೇಮರಹಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ನಾಗನಾಯಕ ಹೃದಯಾಘಾತದಿಂದ ಮೃತಪಟ್ಟವರು. ನಾಗನಾಯಕ ರಾತ್ರಿ ಡ್ಯೂಟಿ ಮುಗಿಸಿ ಚಾಮರಾಜ ನಗರದ ಪೊಲೀಸ್ ಗೃಹಕ್ಕೆ ಬೆಳಗ್ಗೆ ಬಂದಿದ್ದರು. ಹಾಗೆ ಬಂದವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಅಸು ನೀಗಿದ್ದಾರೆ. ಆಸ್ತಿಗಾಗಿ ಮಗನಿಂದ ತಾಯಿ ಮೇಲೆ ಹಲ್ಲೆ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದಲ್ಲಿ

ಮದುವೆಯ ಅರತಕ್ಷತೆ ವೆಳೆ ಹೃದಯಾಘಾತದಿಂದ ಯುವಕ ಸಾವು

ಶಿವಮೊಗ್ಗ: ಮದುವೆಯಾದ ಮರುದಿನವೇ ನವವಿವಾಹಿತ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಕಲ್ಯಾಣ ಮಂದಿರದಲ್ಲಿ ಸಂಭವಿಸಿದೆ. ಕಳೆದ ನವೆಂಬರ್ 30ರಂದು ಶಿವಮೊಗ್ಗದ ಕಲ್ಯಾಣ ಮಂದಿರದಲ್ಲಿ ವಿವಾಹ ಸಮಾರಂಭದ ವೇಳೆ ಹೃದಾಯಾಘಾತದಿಂದ ಆಸ್ಪತ್ರೆ ಸೇರಿದ್ದ ರಮೇಶ್ (30) ಮೃತಪಟ್ಟಿದ್ದಾರೆ. ರಮೇಶ್ ವಿಜಯನಗರ ಜಿಲ್ಲೆ ಹರಪನಹಳ್ಳಿ

ಸಂಗಾತಿಯ ಕೊಲೆಗೈದಾತ ಪೊಲೀಸ್‌ ಕಸ್ಟಡಿಯಲ್ಲಿ ಹೃದಯಾಘಾತದಿಂದ ಸಾವು

ಲಿವ್-ಇನ್ ಸಂಗಾತಿಯ ಕೊಂದಾತ ಪೊಲೀಸ್ ಕಸ್ಟಡಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೌರಾಷ್ಟ್ರದಲ್ಲಿ ನಡೆದಿದೆ. ಮಧ್ಯಪ್ರದೇಶ ಮೂಲದ ನರೇಂದ್ರ ಸಿಂಗ್ ಧ್ರುವೇಲ್ ಸಂಗಾತಿಯ ಕೊಂದು ಪೊಲೀಸ್‌ ವಶದಲ್ಲಿರುವಾಗ ಮೃತಪಟ್ಟಿದ್ದಾನೆ. ಸೌರಾಷ್ಟ್ರದ ಸೆರಾಮಿಕ್ ಕಾರ್ಖಾನೆಯ ಕಾರ್ಮಿಕ ವಸತಿಗೃಹದಲ್ಲಿ ಈ ಜೋಡಿ ಮೂರು ತಿಂಗಳಿನಿಂದ ವಾಸವಿತ್ತು.

ತರೀಕೆರೆಯಲ್ಲಿ ನಾಳೆ ಮದುವೆ: ವಧು ಇಂದು ಹೃದಯಾಘಾತಕ್ಕೆ ಬಲಿ

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದ ವಧು ಶೃತಿ (32) ಅವರ ಮದುವೆ ನಾಳೆ ತರೀಕೆರೆಯಲ್ಲಿ ನಡೆಯಲು ಎಲ್ಲ ಸಿದ್ಧತೆ ಆಗಿತ್ತು, ಆದರೆ ಇಂದು ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಾಳೆ ತರೀಕೆರೆ ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಶೃತಿ ಮತ್ತು

ಸಹ ಚಾಲಕನಿಗೆ ಬಸ್‌ ಕೊಟ್ಟ ಚಾಲಕ ಹೃದಯಾಘಾತಕ್ಕೆ ಬಲಿ

ಇಂದೋರ್‌ನಿಂದ ರಾಜಸ್ಥಾನ ಕಡೆಗೆ ಬಸ್ ಚಲಾಯಿಸುತ್ತಿದ್ದ ಚಾಲಕರೊಬ್ಬರು ಸಹಚಾಲಕನಿಗೆ ಬಸ್‌ ಚಾಲನೆ ಮಾಡುವುದಕ್ಕೆ ಕೊಟ್ಟ ಸ್ವಲ್ಪ ಹೊತ್ತಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಾಲಕ ಸತೀಶ್ ರಾವ್ ಅವರಿಗೆ ರಾಜಸ್ಥಾನದ ಪಾಲಿ ತಲುಪುವಾಗ ಅನಾರೋಗ್ಯ ಕಾಡುತ್ತಿದೆ ಎಂದು ಅನಿಸಲಾರಂಭಿಸಿದೆ. ತಕ್ಷಣ ಬಸ್‌ ಅನ್ನು ಓಡಿಸುವಂತೆ

ಪಾರ್ಕ್ ಮಾಡಿದ್ದ ಕಾರಿನಲ್ಲಿ ಹೃದಯಾಘಾತಕ್ಕೆ ಯುವಕ ಬಲಿ

ಪಾರ್ಕ್ ಮಾಡಿದ್ದ ಕಾರಿನಲ್ಲಿ ಹೃದಯಾಘಾತದಿಂದ ಯುವಕ ಮೃತಪಟ್ಟಿರುವ ಘಟನೆ ಬೆಂಗಳೂರು ನಗರದ ಬ್ರೂಕ್ ಫೀಲ್ಡ್ ರಸ್ತೆಯಲ್ಲಿ ನಡೆದಿದೆ. ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ, ಇಂದಿರಾನಗರ ನಿವಾಸಿ ಸಂತೋಷ್ ಪ್ರಸಾದ್ (37) ಮೃತಪಟ್ಟವರು. ಎಂದಿನಂತೆ ಕಾರಿನಲ್ಲಿ ಆಫೀಸಿಗೆ ಹೋಗುವಾಗ ಹೃದಯಾಘಾತ

ಅರಸೀಕೆರೆಯಲ್ಲಿ ಒಂದೇ ದಿನ ಹೃದಯಾಘಾತದಿಂದ ಉಸಿರು ಚೆಲ್ಲಿದ ಅತ್ತಿಗೆ,ನಾದಿನಿ

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ  ಅತ್ತಿಗೆ ಮತ್ತು ನಾದಿನಿ ಒಂದೇ ದಿನ ಹೃದಯಾಘಾತಕ್ಕೊಳಗಾಗಿ ಮೃತಪಟಟ್ಟಿದ್ದಾರೆ.  ಅರಸೀಕೆರೆ ತಾಲೂಕು ಗಂಗಾಮತಸ್ಥ ಸಂಘದ ಅಧ್ಯಕ್ಷರಾದ ಕೇಶವಮೂರ್ತಿ ಅವರ ಸಹೋದರಿ ಜಾವಗಲ್ ಗ್ರಾಮದ ಪಿಎಸಿಎಸ್ ಹಾಲಿ ನಿರ್ದೇಶಕಿ ಹಾಗೂ ಮಾಜಿ ಅಧ್ಯಕ್ಷೆ, ಗ್ರಾ.ಪಂ ಮಾಜಿ ಸದಸ್ಯೆ

ಪಿರಿಯಾಪಟ್ಟಣದಲ್ಲಿ ಹೃದಯಾಘಾತದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸಾವು

ಹೃದಯಾಘಾತದಿಂದ ಯುವಕರು,ಯುವತಿಯರು, ಮಕ್ಕಳ ಸಾವಿನ ಸರಣಿ ಮುಂದುವರಿಯುತ್ತಿದ್ದು, ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಇಂದು (ಸೋಮವಾರ)ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ನಾಗರಾಜ್, ವಸಂತ ದಂಪತಿ ಪುತ್ರಿ ದೀಪಿಕಾ (15) ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿನಿ. ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ದೀಪಿಕಾ ಇದ್ದಕ್ಕಿದ್ದಂತೆ

ಕುಳಿತಲ್ಲೇ ಹೃದಯಾಘಾತ: ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಸಾವು

ಕಲಬುರಗಿಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ 17 ವರ್ಷದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಕೋರೇಶ್ ಸಿದ್ದಣ್ಣ ಮದ್ರಿ ಮೃತಪಟ್ಟ ಯುವಕ. ಕಲಬುರಗಿ ನಗರದಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಕೋರೇಶ್ ಸ್ನೇಹಿತರ ಜೊತೆ ಕುಳಿತಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಗೆಳೆಯ

ಕರ್ತವ್ಯನಿರತ ಯೋಧ ಬಾಗಲಕೋಟೆಯ ಚನ್ನಯ್ಯ ರೇಷ್ಮೆ ಹೃದಯಾಘಾತಕ್ಕೆ ಬಲಿ

ರಾಜಸ್ಥಾನದಲ್ಲಿ ಕರ್ತವ್ಯನಿರತರಾಗಿದ್ದ ಬಾಗಲಕೋಟೆಯ ಯೋಧ ಮಾಗೊಂಡಯ್ಯ ಚನ್ನಯ್ಯ ರೇಷ್ಮೆ (37) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಯೋಧ ಕರ್ತವ್ಯದಲ್ಲಿ ಇದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ 14 ವರ್ಷದಿಂದ ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೆಳಗಾವಿ ಮರಾಠಾ ಇನ್‌ಫೆಂಟ್ರಿ