Menu

ಬಾಣಸವಾಡಿಯಲ್ಲಿ ಪತಿಯಿಂದಲೇ ಮಹಿಳೆಯ ಕೊಲೆ

ಬೆಂಗಳೂರಿನ ಬಾಣಸವಾಡಿಯಲ್ಲಿ ಮಹಿಳೆಯೊಬ್ಬರನ್ನು ಪತಿಯೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆಯಿತು. ಪತಿ ರಮೇಶ್ ಕೊಲೆ ಆರೋಪಿ, ಕಲೈವಾಣಿ ಕೊಲೆಯಾಗಿರುವ ಮಹಿಳೆ. ಇಬ್ಬರೂ ಕೆಲವು ವರ್ಷಗಳ ಹಿಂದೆ ಪರಸ್ಪರ  ಎರಡನೇ ವಿವಾಹವಾಗಿದ್ದರು. ಮರಗೆಲಸ ಮಾಡಿಕೊಂಡಿದ್ದ ಆರೋಪಿ ಉಳಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಆರೋಪಿ ರಮೇಶ್‌ಗೆ ಈ ಮಹಿಳೆಯನ್ನು ಮದುವೆಯಾಗುವಾಗಲೇ ಇಬ್ಬರು ಮಕ್ಕಳಿದ್ದರು. ಮಕ್ಕಳ ವಿಷಯವಾಗಿ ಒಂದು ವರ್ಷದಿಂದ ಇಬ್ಬರ ನಡುವೆ ಗಲಾಟೆಯಿತ್ತು ಎನ್ನಲಾಗಿದೆ. ಗಲಾಟೆ ಜೋರಾಗಿ ಪತ್ನಿಯನ್ನು ಕೊಲೆ ಮಾಡಿದ ಆರೋಪಿ,