Wednesday, November 19, 2025
Menu

ಪಾಕಿಸ್ತಾನ ಸೇನೆಯಿಂದ ಮಿಂಚಿನ ಕಾರ್ಯಾಚರಣೆ: 27 ಬಂಡುಕೋರರ ಹತ್ಯೆ; 150 ಒತ್ತೆಯಾಳುಗಳ ರಕ್ಷಣೆ!

ರೈಲು ಹೈಜಾಕ್ ಮಾಡಿದ್ದ 27 ಬಲೂಚಿಸ್ತಾನದ ಬಂಡುಕೋರರನ್ನು ಹತ್ಯೆ ಮಾಡಿದ ಪಾಕಿಸ್ತಾನದ ಸೇನೆ 150 ಒತ್ತೆಯಾಳುಗಳನ್ನು ರಕ್ಷಿಸಿದೆ. ಪಾಕಿಸ್ತಾನ ಪೇಶಾವರಕ್ಕೆ ಹೊರಟ್ಟಿದ್ದ ಜಾಫರ್ ರೈಲನ್ನು ನಿನ್ನೆ ಅಪಹರಿಸಿದ್ದ ಬಂಡುಕೋರರು ಬಲೂಚಿಸ್ತಾನಕ್ಕೆ ಕೊಂಡೊಯ್ದಿದ್ದರು. ಮಂಗಳವಾರ ರಾತ್ರಿ ಪೂರ್ಣ ಪ್ರಮಾಣದ ಸೇನೆ ಬಳಸಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನ 27 ಬಂಡುಕೋರರನ್ನು ಕೊಂದು 150 ಪ್ರಯಾಣಿಕರನ್ನು ರಕ್ಷಿಸಿದೆ. ಒತ್ತೆಯಾಳುಗಳಾಗಿ ಇದ್ದ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಚಿಕಿತ್ಸೆ