Bali
ಬಾಲಿಯಲ್ಲಿ ಜ್ವಾಲಾಮುಖಿ ಸ್ಫೋಟ: ಏರ್‌ಇಂಡಿಯಾ ವಿಮಾನ ದೆಹಲಿಗೆ ವಾಪಸ್
ಮೌಂಟ್ ಲೆವೊಟೊಬಿ ಲಕಿ-ಲಕಿಯಲ್ಲಿ ಜ್ವಾಲಾಮುಖಿಯ ದಟ್ಟ ಹೊಗೆಯು 10 ಕಿ.ಮೀ ಎತ್ತರ ವ್ಯಾಪಿಸಿದ್ದು, ಸುರಕ್ಷತೆಯ ದೃಷ್ಟಿಯಿಂದ ಬಾಲಿಗೆ ಹೊರಟಿದ್ದ ಏರ್ ಇಂಡಿಯಾದ ವಿಮಾನವನ್ನು ಹಿಂತಿರುಗಿಸಲಾಗಿದೆ. ಬಾಲಿಗೆ ತೆರಳುವ ಹಲವು ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿವೆ. ಏರ್ ಇಂಡಿಯಾ ವಿಮಾನ ಬೆಳಗ್ಗೆ ದೆಹಲಿಯಿಂದ ಬಾಲಿಗೆ ಹೊರಟಿತ್ತು. ಜ್ವಾಲಾಮುಖಿ ಸ್ಫೋಟದ ಅಪಾಯ ಗಮನಿಸಿ ಮಾನವನ್ನು ಮಧ್ಯದಾರಿಯಲ್ಲೇ ದೆಹಲಿಗೆ ವಾಪಸ್ ಕರೆಸಲಾಯಿತು. ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಏರ್ ಇಂಡಿಯಾ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.