Thursday, February 13, 2025
Menu

ಸದಾಶಿವನಗರ ಬ್ಯಾಡ್ಮಿಂಟನ್ ಲೀಗ್: ಬಿಎಂಆರ್ಜಿ ಫೈರಿ ಫಾಲ್ಕನ್ಸ್‌ಗೆ ಪ್ರಶಸ್ತಿ

ಬೆಂಗಳೂರು: ಬಿ.ಆರ್.ಶ್ರೀಧರ್ ಒಡೆತನದ ಬಿಎಂಆರ್‍ಜಿ-ಫೈರಿ ಫಾಲ್ಕನ್ಸ್ ಇತ್ತೀಚೆಗೆ ಮುಕ್ತಾಯಗೊಂಡ ಸದಾಶಿವನಗರ ಬ್ಯಾಡ್ಮಿಂಟನ್ ಲೀಗ್‍ನಲ್ಲಿ ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್‍ನಲ್ಲಿ ಥಂಡರ್ ಡ್ರಾಗನ್ಸ್ ತಂಡವನ್ನು 3-1 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಎರಡೂ ತಂಡಗಳು ತಮ್ಮೆಲ್ಲ ಕೌಶಲಗಳನ್ನು ಒರೆಗೆ ಹೆಚ್ಚಿದ ಪಂದ್ಯ ಕೊನೆ ಕ್ಷಣದವರೆಗೂ ಪ್ರೇಕ್ಷಕರನ್ನು ತುದಿಗಾಗಲ್ಲಿ ನಿಲ್ಲುವಂತೆ ಮಾಡಿತು. ಚಾಂಪಿಯನ್‍ಶಿಪ್ ಗೆಲ್ಲಲೇಬೇಕೆಂಬ ಕೆಚ್ಚಿನಿಂದ ಹೋರಾಡಿದ ನಾಯಕ ರಿತೇಶ್ ಸುರೇಶ್ ನೇತೃತ್ವದ ತಂಡ ಅಂತಿಮವಾಗಿ ಪ್ರಾಬಲ್ಯ ಮೆರೆಯಿತು. ಆದಾಗ್ಯೂ, ನಿಶಾಂತ್ ನೇತೃತ್ವದ