Baby death
ಜಮಖಂಡಿಯಲ್ಲಿ ಗರ್ಭದಲ್ಲೇ ಶಿಶು ಸಾವು: ವೈದ್ಯರ ನಿರ್ಲಕ್ಷ್ಯವೆಂದು ಕುಟುಂಬ ಆಕ್ರೋಶ
ಬಾಗಲಕೋಟೆಯ ಜಮಖಂಡಿಯಲ್ಲಿರುವ ತಾಯಿ-ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭದಲ್ಲೇ ಶಿಶು ಮೃತಪಟ್ಟಿದ್ದು, ಇದಕ್ಕೆ ವೈದ್ಯರ ಬೇಜವಾಬ್ದಾರಿಯೇ ಕಾರಣವೆಂದು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ಜಮಖಂಡಿಯ ಚೌಡಯ್ಯ ನಗರದ ನಿವಾಸಿ.ಶಿವಪ್ಪ ರೇವಣಸಿದ್ದಪ್ಪ ಬೋವಿ ಅವರ ಪತ್ನಿ ಇಂದ್ರಾ ಅವರ ಗರ್ಭದಲ್ಲೇ ಮಗು ಮೃತಪಟ್ಟಿದೆ. ಇಂದ್ರಾ ಅವರನ್ನು ರಾತ್ರಿ 2 ಗಂಟೆಗೆ ಆಸ್ಪತ್ರೆಗೆ ದಾಖಲಿಸಿದ್ದರೂ ವೈದ್ಯರು ಕೇರ್ ಮಾಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಡೆಲಿವರಿಗೆ ಸಮಯವಿದೆ. ಬೆಳಿಗ್ಗೆ 4 ಗಂಟೆಗೆ ಆಡ್ಮಿಟ್ ಮಾಡುವುದಾಗಿ ವೈದ್ಯರಿಗೆ ನರ್ಸ್