Menu

ಅಥಣಿಯಲ್ಲಿ ಮಕ್ಕಳಾಗಿಲ್ಲವೆಂದು ಸೊಸೆಯನ್ನು ಕೊಂದ ಅತ್ತೆ ಮಾವ

ಸೊಸೆಗೆ ಮಕ್ಕಳಾಗಿಲ್ಲವೆಂದು ಆಕೆಯನ್ನು ಅತ್ತೆ ಮತ್ತು ಮಾವ ಸೇರಿ ಕೊಲೆ ಮಾಡಿರುವ ಘಟನೆ ಅಥಣಿ ತಾಲೂಕಿನ ಮಲ್ಲಬಾದ್ ಗ್ರಾಮದಲ್ಲಿ ನಡೆದಿರುವುದು ಬಹಿರಂಗಗೊಂಡಿದೆ. ಚಡಚಣದ ನಿವಾಸಿ ರೇಣುಕಾ ಹೊನಕುಂಡೆ ಕೊಲೆಯಾದವರು. ರೇಣುಕಾಳ ಪತಿ ಸಂತೋಷ್‌ನ ತಂದೆ ಕಾಮಣ್ಣ, ತಾಯಿ ಜಯಶ್ರೀ ಕೊಲೆ ಮಾಡಿದವರು. ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಕಾ ಹೊನಕುಂಡೆ ಬಿಎಚ್ಎಂಎಸ್ ಮುಗಿಸಿದ್ದು, 2020ರಲ್ಲಿ ಬೆಳಗಾವಿಯ ಅಥಣಿ ತಾಲೂಕಿನ ಮಲ್ಲಬಾದ್ ಗ್ರಾಮದ ಸಂತೋಷ್​ ಹೊನಕುಂಡೆ ಎಂಬ ಮೆಕ್ಯಾನಿಕಲ್ ಇಂಜಿನಿಯರ್‌ನನ್ನು ಮದುವೆಯಾಗಿದ್ದರು.