asaram bapu
ಅಸರಾಮ್ ಬಾಪುಗೆ ಮಧ್ಯಂತರ ಜಾಮೀನು!
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಸರಾಮ್ ಬಾಪುಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 85 ವರ್ಷದ ಸ್ವಯಂ ಘೋಷಿತ ದೇವಮಾನವ ಅಸರಾಮ್ ಬಾಪು ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂಕೋರ್ಟ್ ಮಾರ್ಚ್ 31ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಜೈಲಿನಿಂದ ಬಿಡುಗಡೆ ಆದ ನಂತರ ಸಾಕ್ಷಿಗಳನ್ನು ನಾಶಪಡಿಸಬಾರದು ಹಾಗೂ ತಮ್ಮ ಅನುಯಾಯಿಗಳನ್ನು ಭೇಟಿ ಮಾಡಬಾರದು ಎಂಬ ಷರತ್ತನ್ನು ಅಸರಾಮ್ ಬಾಪುಗೆ ಸುಪ್ರೀಂಕೋರ್ಟ್ ವಿಧಿಸಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಅಸರಾಮ್