Menu

ಅಮೃತಸರದಲ್ಲಿ ನಕಲಿ ಮದ್ಯ ಸೇವಿಸಿ 14 ಕಾರ್ಮಿಕರ ಸಾವು

ಪಂಜಾಬ್‌ನ ಅಮೃತಸರ ಜಿಲ್ಲೆಯ ಗ್ರಾಮಗಳಲ್ಲಿ ಇಟ್ಟಿಗೆ ಗೂಡುಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರು ನಕಲಿ ಮದ್ಯ ಸೇವಿಸಿದ ಪರಿಣಾಮವಾಗಿ 14 ಮಂದಿ ಮೃತಪಟ್ಟಿದ್ದಾರೆ. ಭಂಗಲಿ, ಪಾತಾಳಪುರಿ, ಮರಾರಿ ಕಲಾನ್, ಥೆರೆವಾಲ್ ಮತ್ತು ತಲ್ಯಾಂಡಿ ಘುಮಾನ್ ಗ್ರಾಮಗಳಲ್ಲಿ ಈ ಸಾವು ಸಂಭವಿಸಿವೆ. ಅಗ್ಗದ ದರದಲ್ಲಿ ಲಭ್ಯವಾದ ನಕಲಿ ಮದ್ಯವನ್ನು ಸೇವಿಸಿದ್ದರಿಂದ ಈ ದುರಂತ ನಡೆದಿದೆ. ಹಲವರು ಗಂಭೀರ ಸ್ಥಿತಿಯಲ್ಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಸೋಮವಾರ ರಾತ್ರಿ ನಕಲಿ ಮದ್ಯ ಸೇವಿಸಿದವರು

ಪಾಕ್‌ ಪರ ಬೇಹುಗಾರಿಕೆ ಮಾಡುತ್ತಿದ್ದ ಇಬ್ಬರ ಬಂಧನ

ಭಾರತದ ವಿರುದ್ಧ ಉಗ್ರರ ಕಾರ್ಯಾಚರಣೆಯನ್ನು ಬೆಂಬಲಿಸುತ್ತ ಬಂದಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರ ಕೆಲಸ ಮಾಡುತ್ತಿದ ಇಬ್ಬರನ್ನು ಪಂಜಾಬ್‌ನ ಅಮೃತಸರ ಪೊಲೀಸರು ಬಂಧಿಸಿದ್ದಾರೆ. ಅಮೃತಸರ ಗ್ರಾಮೀಣ ಪೊಲೀಸರು ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.