ರಾಯಬಾಗ ವರ್ತಕರಿಂದ ಜಾಣ್ಮೆಯ ನಡೆ; ತುಕಾರಾಮ ಮದಲೆ 

ರಾಯಬಾಗ ವರ್ತಕರಿಂದ ಜಾಣ್ಮೆಯ ನಡೆ; ತುಕಾರಾಮ ಮದಲೆ 

ರಾಯಬಾಗ: ಪಟ್ಟಣದ ಅಂಗಡಿಗಳು ಬಹುದಿನಗಳಿಂದ ವ್ಯಾಪಾರ-ವಹಿವಾಟು ಇಲ್ಲದೆ ಬಂದ್ ಆಗಿದ್ದವು ಸರಕಾರದ ಆದೇಶದಂತೆ ಸೋಮವಾರ ಪಟ್ಟಣ ಅನ್ ಲಾಕ್ ಆಗಿದೆ ಕರೋನಾ ಭೀಕರತೆಯನ್ನು ಅರಿತ ಅಂಗಡಿಕಾರರು ವಿಶೇಷ ಕಾಳಜಿವಹಿಸಿ ವಹಿಸಿ ಅಂಗಡಿಯ ಅರ್ಧ ಬಾಗಿಲು ತೆಗೆದು ವ್ಯಾಪಾರ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ

ಅನ್ ಲಾಕ್ ಮೊದಲ ದಿನ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಪಟ್ಟಣದ ವ್ಯಾಪಾರಸ್ಥರು ಮಂಚೂಣಿಯಲ್ಲಿ ಇದ್ದಾರೆ ಮೊದಲ ದಿನವಾದ ಇಂದು ಕೆಲವೊಂದು ವರ್ತಕರು ಅಂಗಡಿಗಳನ್ನು ತೆರೆಯದೇ ಇದ್ದದ್ದು ವಿಶೇಷವಾಗಿತ್ತು ಇನ್ನು ಉಳಿದ ವರ್ತಕರು, ತಮ್ಮ ಅಂಗಡಿಗಳ ಸ್ವಲ್ಪ ಬಾಗಿಲನ್ನು ತೆರೆದು ವ್ಯಾಪಾರ ಮಾಡುತ್ತಿರುವುದು ಪಟ್ಟಣದಲ್ಲಿನ ಜನ ನೆಮ್ಮದಿಯ ಉಸಿರು ಬಿಡುವಂತಾಗಿದೆ ಪಟ್ಟಣದಲ್ಲಿ ಕಾಯಿಪಲ್ಲೆ ವ್ಯಾಪಾರಸ್ಥರು ಎಂದಿನಂತೆ ತಮ್ಮ ವ್ಯಾಪಾರ-ವಹಿವಾಟು ನಡೆಸಿದರು ಆರಂಭದಲ್ಲಿ ಜನರು ಕೊಂಚ ಗಲಿಬಿಲಿಗೊಂಡಂತೆ ಕಂಡರು ಪಟ್ಟಣ ಪಂಚಾಯತಿ ಸಿಬ್ಬಂದಿ ಮಧ್ಯ ಪ್ರವೇಶಿಸಿ ಜನರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಪಾಠ ನೀಡಿದರು

ಪಟ್ಟಣ ಪಂಚಾಯತಿಯ ಮಾರ್ಷಿಯಲ್ ಗಳು, ಸಿಬ್ಬಂದಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕೆಲಸ ನಿರ್ವಹಿಸುತ್ತಿದ್ದಾರೆ ಪಟ್ಟಣದ ಪಂಚಾಯಿತಿ ಎದುರುಗಡೆ ಇರುವ ಮಾನಸ ಮಾಂಗಲ್ಯ ಹೋಟೆಲ್ ತನ್ನ ಸಿಬ್ಬಂದಿ ಸೇರಿದಂತೆ ಹೋಟೆಲ್ ಆವರಣವನ್ನು ಸ್ಯಾನಿಟರೈಜ ಮಾಡಿ ಸಾಮಾಜಿಕ ಅಂತರ ಕಾಪಾಡಿಕೊಂಡು ಜನರ ಸೇವೆ ನೀಡುತ್ತಿರುವುದು ಎಲ್ಲರ ಗಮನ ಸೆಳೆದಿದೆ

ಸರಕಾರದ ಆದೇಶದಂತೆ ಸೋಮವಾರ ಬೆಳಗಿನ ಜಾವದಿಂದ ವಿಶಿಷ್ಟ ಕಾಳಜಿವಹಿಸಿ ವ್ಯಾಪಾರ-ವಹಿವಾಟು ಎಂದಿನಂತೆ ನಡೆದಿದೆ ಇದೇ ಕಾಳಜಿಯನ್ನು ಜನರು ಬರುವ ದಿನಗಳಲ್ಲಿ ಮುಂದುವರಿಸಿದರೆ ಕರೋನಾ ಮೂರನೇ ಅಲೆಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ತಾಲೂಕಿನ ತಹಶೀಲ್ದಾರ್ ಡಾ ಮೋಹನ್ ಬಸ್ಮೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *