ಸ್ಟಾರ್ ನಟ ವಿಜಯ ದೇವರಕೊಂಡರ ಮುಂದಿನ ಹೊಸ ಸಿನಿಮಾ ‘ಜೆಸಿಎಂ’

ಮುಂಬೈ: ಮಾರ್ಚ್ 29 (ಉದಯಕಾಲ ನ್ಯೂಸ್) ಟಾಲಿವುಡ್ ನಲ್ಲಿ ಹಲವು ಬಹುಬೇಡಿಕೆಯ ನಟರಲ್ಲಿ ವಿಜಯ ದೇವರಕೊಂಡ ಕೂಡ ಒಬ್ಬರು. ಅರ್ಜುನ್ ರೆಡ್ಡಿ, ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಚಿತ್ರದ ಮೂಲಕ ಸ್ಟಾರ್ ಗಿರಿ ಹೆಚ್ಚಿಸಿಕೊಂಡಿರುವ ಇವರು ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ವಿಜಯ್ ದೇವರಕೊಂಡ ಅಭಿನಯದ ಲೀಗರ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಅದುವೇ ‘ಜೆಸಿಎಂ’. ಈ ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಇವರಿಬ್ಬರ ಮತ್ತೊಂದು ಕಾಂಬಿನೇಷನ್ ಸಿನಿಪ್ರಿಯರಿಗೆ ರಸದೌತಣ ನೀಡಲು ಸಜ್ಜಾಗುತ್ತಿದೆ.

ಈ ವಿಚಾರವನ್ನು ಖುದ್ದಾಗಿ ವಿಜಯ ದೇವರಕೊಂಡ ಅವರೇ ಹಂಚಿಕೊಂಡಿದ್ದು, “ಹೆಚ್ಚು ಹುಚ್ಚು. ನನ್ನ ಜೀವನದ ಮುಂದಿನ ಒಂದು ವರ್ಷ #JGM. ವಿಶ್ವಾದ್ಯಂತ ಆಗಸ್ಟ್ 3, 2023ರಲ್ಲಿ ಬಿಡುಗಡೆಯಾಗುತ್ತಿದೆ ಎಂದು ಬರೆದಿದ್ದಾರೆ.

ಈಗಾಗಲೇ ಪುರಿ ಜಗನ್ನಾಥ್ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆಯು “ಭಾರತೀಯರು ಹುಲಿಗಳು, ಭಾರತೀಯರು ಹೋರಾಟಗಾರರು, ಭಾರತೀಯರು ಈ ಜಗತ್ತನ್ನು ಆಳಬಹುದು. #JGM ನ ಆತ್ಮವನ್ನು ಕಲಕುವ ಮೋಷನ್ ಪೋಸ್ಟರ್ ಇಲ್ಲಿದೆ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದೆ.

ವಿಜಯ್ ಅವರು ಸೇನಾಧಿಕಾರಿಯ ವೇಷದಲ್ಲಿ ಚಾಪರ್ ನಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಮುಂದಿನ ತಿಂಗಳಿನಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಚಿತ್ರವು ಆಗಸ್ಟ್ 23, 2023 ರಂದು ತೆರೆ ಕಾಣಲಿದೆ

,

Leave a Reply

Your email address will not be published. Required fields are marked *