“ಹಮಾರಾ ಕುತ್ತಾ ಹಮಾರೆ ಗಲ್ಲಿಮೇ ಶೇರ್”: ಸಿದ್ದರಾಮಯ್ಯ

 

ಬೆಂಗಳೂರು,ಜು.5 “ಹಮಾರಾ ಕುತ್ತಾ ಹಮಾರೆ ಗಲ್ಲಿಮೇ ಶೇರ್” ಎಂದು ನಾಣ್ನುಡಿಯನ್ನು ಉಲ್ಲೇಖಿಸುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದರ್ಪವೇನಿದ್ದರೂ ನಮ್ಮ ರಾಜ್ಯದಲ್ಲಿಯೇ ಹೊರತು ಕೇಂದ್ರದ ಮುಂದಾಗಲೀ ಪಿಎಂ ಮುಂದಾಗಲೀ ಅಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಬಸವನಗುಡಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ದ್ರೋಹ ಮಾಡಿದ್ದಾರೆ. ಒಂದುವೇಳೆ ನಾನು ಸಿಎಂ ಆಗಿದ್ದಿದ್ದರೆ ನಿರ್ಮಲಾ ಸೀತಾರಾಮನ್ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೆ. , ಯಡಿಯೂರಪ್ಪ ಕೇಂದ್ರದ ಬಳಿ ಮಾತನಾಡುವುದೇ ಇಲ್ಲ. ಹಮಾರಾ ಕುತ್ತಾ ಹಮಾರಾ ಗಲ್ಲಿ ಮೇ ಶೇರ್ ಎನ್ನುತ್ತಾರಲ್ಲ ಹಾಗೆ ಇವರ ನಡೆ ಎಂದರು.

ಸರ್ಕಾರ ಕೊರೊನಾ ಸಂದರ್ಭದಲ್ಲಿ ಜನರ ಸಂಕಷ್ಟ ಬಗೆಹರಿಸುವ ಕೆಲಸ ಮಾಡಬೇಕಿತ್ತು. ಪ್ರತಿಯೊಬ್ಬರಿಗೂ 10 ಸಾವಿರ ರೂಪಾಯಿ ಕೊಡಿ ಎಂದು ಒತ್ತಾಯ ಮಾಡಿದ್ದೆವು. ನಮ್ಮ ಸರ್ಕಾರವಿದ್ದಿದ್ದರೆ 10 ಕೆಜಿ ಅಕ್ಕಿ ಕೊಡುತ್ತಿದ್ದೆವೆ. ಆದರೆ ಈಗ ಇವರು ಎರಡು ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಹತ್ತು ಕೆಜಿ ಕೊಟ್ಟಿದ್ದರೆ ಇವರ ಗಂಟೇನಾದರೂ ಹೋಗುತ್ತಿತ್ತೇ? ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಅವನು ಸೂರ್ಯ ಅಲ್ಲ ಕತ್ತಲು, ರವಿ ಸುಬ್ರಮಣ್ಯ ಏನು ಮಾಡುತ್ತಿದ್ದಾರೆರೆ ಎಂದು ನೀವು ಕೇಳಬೇಕು.ಈ ದೇಶದ ರಾಜಕೀಯ ಸೂರ್ಯ ಎಂದರೆ ಡಾ.ಅಂಬೇಡ್ಕರ್. ಇವನು ಸುಮ್ಮನೆ ಸೂರ್ಯ ಎಂದು ಹೆಸರಿಟ್ಟುಕೊಂಡಿದ್ದಾನೆ. ನೀವು ನನ್ನನ್ನ ಗೆಲ್ಲಿಸುತ್ತೇನೆ ಎಂದರೆ ಬಸವನಗುಡಿಗೆ ಬರುತ್ತೇನೆ. ಆ ರವಿಸುಬ್ರಹ್ಮಣ್ಯ, ಸೂರ್ಯನ್ನೇ ಗೆಲ್ಲಿಸುತ್ತೇನೆ. ಎಂದರೆ ಏನುಮಾಡಲೀ? ಎಂದು ಮಾರ್ಮಿಕವಾಗಿ ನುಡಿದ ಸಿದ್ದರಾಮಯ್ಯ, ಡಾ.ಅಂಬೇಡ್ಕರ್ ಬರೆದ ಸಂವಿಧಾನ ಸುಟ್ಟುಹಾಕುವವರು, ಸಮಾಜ ಒಡೆಯುವವರು ಇವರು. ಜಾತಿ ನಡುವೆ ಜಗಳ ತಂದಿಡುತ್ತಾರೆ, ಚೆನ್ನಾಗಿದ್ರೆ ಸಹಿಸುವುದಿಲ್ಲ. ಬಿಜೆಪಿಯನ್ನು ಬೇರು ಸಹಿತ ಕಿತ್ತುಹಾಕುವುದು ಒಳ್ಳೆಯದು ಎಂದು ಕಿಡಿಕಾರಿದರು..

,

Leave a Reply

Your email address will not be published. Required fields are marked *