ಬಾದಾಮಿಯಿಂದಲೇ ಸ್ಪರ್ಧೆ ಮಾಡುತ್ತೇನೆ: ಸಿದ್ದರಾಮಯ್ಯ ಸ್ಪಷ್ಟನೆ


ಬೆಂಗಳೂರು,ಜು.6 ಮುಂದಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸ್ಪರ್ಧಿಸಲು ಸ್ಥಳವಿಲ್ಲದ ಕಾರಣ ಇತ್ತೀಚೆಗೆ ಸಿದ್ದರಾಮಯ್ಯ ಚಾಮರಾಜಪೇಟೆ,ಬಸವನಗುಡಿಯಲ್ಲಿ ಸ್ಪರ್ಧಿಸಲು ಆಪ್ತ ಜಮೀರ್ ಜೊತೆ ಹೆಚ್ಚಾಗಿ ಕ್ಷೇತ್ರದಲ್ಲಿ ಕಾಣಸಿಗುತ್ತಿದ್ದಾರೆ ಎಂಬ ಸುದ್ದಿಗೆ ಅಲ್ಲದೇ ಬಾದಾಮಿಯಿಂದ ಸ್ಪರ್ಧಿಸುವುದಿಲ್ಲ ಎಂಬ ಬಿಜೆಪಿಯ ಆರೋಪಕ್ಕೆ ಖುದ್ದು ಸಿದ್ದರಾಮಯ್ಯ ‘ಬಾದಾಮಿ’ ಯಿಂದಲೇ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸುವ ಮೂಲಕ ಸದ್ಯ ಎದ್ದಿರುವ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಸೋಮವಾರ ಕುಮಾರಕೃಪ ನಿವಾಸಕ್ಕೆ ಸುಮಾರು 60 ಕ್ರೂಸರ್ ವಾಹನದಲ್ಲಿ 500ಕ್ಕೂ ಹೆಚ್ಚಿನ ಆಗಮಿಸಿದ ಬಾದಾಮಿ ಮತಕ್ಷೇತ್ರದ ಸಿದ್ದರಾಮಯ್ಯರನ್ನು ಭೇಟಿಯಾಗಿ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಮನವಿ ಮಾಡಿದರು. ಈ ಭಾನುವಾರ ಬಾದಾಮಿಗೆ ಭೇಟಿ ನೀಡುತ್ತಿದ್ದು, ಅಲ್ಲಿಯೇ ಜರನ್ನು ಭೇಟಿಯಾಗುವುದಾಗಿ ಸಿದ್ದರಾಮಯ್ಯ ಹೇಳಿದರು

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಮಾತನಾಡಿ,ಬಾದಾಮಿ ಮತಕ್ಷೇತ್ರದ ಜನರು ಆಗಮಿಸಿ ಮುಂದಿನ ಚುನಾವಣೆಯಲ್ಲಿ‌ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ.ಆದರೆ ನಾನೆಂದಿಗೂ ಬಾದಾಮಿಯಿಂದ ಸ್ಪರ್ಧಿಸುವುದಿಲ್ಲ, ಚಾಮರಾಜಪೇಟೆಯಿಂದ ಸ್ಪರ್ಧಿಸುತ್ತೇನೆ ಎಂದಿಲ್ಲ. ಕೆಲವರು ಅಭಿಮಾನದಿಂದ ಅವರವರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕರೆಯುತ್ತಾರೆ.ಕೆಲವು ಕೊಪ್ಪಳದಿಂದ ಸ್ಪರ್ಧಿಸಿ ಎಂದರೆ, ಮತ್ತೆ ಕೆಲವು ಕೋಲಾರದಿಂದ ಎನ್ನುತ್ತಾರೆ.ನಾನು‌ ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ನಾನು ಮೈಸೂರಿನಿಂದ ಬಾದಾಮಿಗೆ ಬಂದವನನ್ನು ಜನರು ಗೆಲ್ಲಿಸಿ ಶಾಸಕನಾಗಿ ಆರಿಸಿಕಳುಹಿಸಿದ್ದಾರೆ.ಬಾದಾಮಿಗೆ ಒಮ್ಮೆ ನಾಮಪತ್ರ ಸಲ್ಲಿಸಲು ಮತ್ತೊಮ್ಮೆ ಪ್ರಚಾರಕ್ಕೆ ಮಾತ್ರ ಬಂದಿದ್ದೆ.ಅಂತಹದ್ದರಲ್ಲಿಯೇ ಅಭಿಮಾನದಿಂದ ಜನರು ಅಲ್ಲಿಂದ ಆರಿಸಿ ಕಳುಹಿಸಿದ್ದಾರೆ. ನಾನು ಚಾಮುಂಡೇಶ್ವರಿಯಲ್ಲಿ ಐದು ಬಾರಿ ಸ್ಪರ್ಧಿಸಿದ್ದವನು.ಆದರೆ ಎಲ್ಲರೂ ಸೇರಿ ಅಲ್ಲಿ ಸೋಲಿಸಿದರು. ಅಲ್ಲಿ ನನ್ನನ್ನು ಸೋಲಿಸಿದ್ದು ಬೇರೆ ಮಾತು ಎಂದು ಮಾರ್ಮಿಕವಾಗಿ ಹೇಳಿದರು.

ಶಾಸಕನಾದವನು ಜನರ ಸಮಸ್ಯೆ ಆಲಿಸಬೇಕು,ಪ್ರತಿನಿತ್ಯ ಜನರ ಕಷ್ಟ ಆಲಿಸಬೇಕು.ಅದು ನನಗೆ ಅಲ್ಲಿ ಕಷ್ಟವಾಗುತ್ತಿದೆ.ನಿಮ್ಮ ಕಷ್ಟ ಸುಖಗಳಲ್ಲಿ ನಾನು ಭಾಗಿಯಾಗಬೇಕು.ಯಾರೂ ಏನೇ ಹೇಳಬಹುದು ನನ್ನ ಅಂತಕರಣ ಕೇಳಬೇಕಲ್ಲ.ನಾನು ಬಾದಾಮಿಯ ಶಾಸಕನಾಗಿ ಏನು ಮಾಡಬೇಕು ಎಲ್ಲ ಮಾಡಿದ್ದೇನೆ.ಇನ್ನೂ ಎರಡು ವರ್ಷ ಸಮಯವಿದೆ.ಅಲ್ಲಿಯವರೆಗೆ ಹಲವು ಅಭಿವೃದ್ಧಿ ಮಾಡುತ್ತೇನೆ.ಒಬ್ಬ ಶಾಸಕನಾಗಿಯಷ್ಟೇ ನಾನು ಮಾಡಿದ್ದೇನೆ.ಅದರಲ್ಲಿ ದೊಡ್ಡಸ್ಥಿಕೆಯೇನು ಇಲ್ಲ.ಬಾದಾಮಿಯಿಂದಲೇ ಮುಂದಿನ ಬಾರಿಯೂ ಸ್ಪರ್ಧಿಸುತ್ತೇನೆ ಎಂದು ವಿಧಾನಸಭೆಯಲ್ಲಿಯೂ ಈಗಾಗಲೇ ಸ್ಪಷ್ಟಪಡಿಸಿದಂತೆ ಮುಂದಿನ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧಿಸುವುದಾಗಿ ಹೇಳಿದರು.

,

Leave a Reply

Your email address will not be published. Required fields are marked *