ಅರಿಜೋನದಲ್ಲಿ ಗುಂಡಿನ ದಾಳಿ: ಓರ್ವನ ಸಾವು

ಅರಿಜೋನದಲ್ಲಿ ಗುಂಡಿನ ದಾಳಿ: ಓರ್ವನ ಸಾವು

ವಾಷಿಂಗ್ಟನ್, ಜೂನ್ 18  ಅಮೆರಿಕದ ಅರಿಜೋನಾದಲ್ಲಿ ನಡೆದ ಗುಂಡಿನ ದಾಳಿ ಘಟನೆಗಳಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇತರೆ 12 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಎಬಿಸಿ ವರದಿಯ ಪ್ರಕಾರ ಬಂದೂಕುಧಾರಿ ಸುಮಾರು 90 ನಿಮಿಷಗಳಲ್ಲಿ ವಿವಿಧ ನಗರಗಳಲ್ಲಿ ಹಲವು ಕಡೆ ಪ್ರತ್ಯೇಕ ಗುಂಡಿನ ದಾಳಿ ನಡೆಸಿದ್ದು ಈಗಾಗಲೇ ಶಂಕಿತನನ್ನು ಪೊಲೀಸರು ಬಂಧಿಸಲಾಗಿದೆ. ಒಟ್ಟು 13ಜನರು ಘಟನೆಯಲ್ಲಿ ತೊಂದರೆಗೆ ಒಳಗಾಗಿದ್ದಾರೆ.
ಆದರೆ ಅವರೆಲ್ಲರೂ ಗುಂಡೇಟಿನಿಂದ ಗಾಯಗೊಂಡವರಲ್ಲ. ಈವರೆಗೆ ಘಟನೆಯಲ್ಲಿ ಕನಿಷ್ಠಗ ಒಬ್ಬನ ಸಾವು ಸಂಭವಿಸಿದೆ ಎಂದು ಪಿಯೋರಿಯಾ ಪೊಲೀಸ್ ಇಲಾಖೆಯ ವಕ್ತಾರ ಬ್ರಾಂಡನ್ ಶೆಫರ್ಟ್ ಹೇಳಿದ್ದಾರೆ.

 

,

Leave a Reply

Your email address will not be published. Required fields are marked *