ಕೊಲ್ಕಾತ್ತಾ, ಜ ೨೩(ಉದಯಕಾಲ) ನೇತಾಜಿ ಸುಭಾಷ್ ಚಂದ್ರ ಬೋಸ್ ೧೨೫ನೇ ಜಯಂತಿ ನೆನಪಿಗಾಗಿ ನೇತಾಜಿ ರಿಸರ್ಚ್ ಬ್ಯೂರೋ.. ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ “ನೇತಾಜಿ ಅವಾರ್ಡ್ ೨೦೨೨” ಪ್ರದಾನ ಮಾಡಿದೆ. ಈ ಸಂಬಂಧ ಕೊಲ್ಕಾತ್ತಾದ ಎಲ್ಗಿನ್ ರಸ್ತೆಯಲ್ಲಿರುವ ಸುಭಾಷ್ ಚಂದ್ರ ಬೋಸ್ ನಿವಾಸದಲ್ಲಿ ಭಾನುವಾರ ವರ್ಚುವಲ್ ವಿಧಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ “ನೇತಾಜಿ ಅವಾರ್ಡ್ ೨೦೨೨” ಶಿಂಜೋ ಅವರಿಗೆ ಪ್ರದಾನ ಮಾಡಲಾಯಿತು ಎಂದು ರಿಸರ್ಚ್ ಬ್ಯೂರೋ ತಿಳಿಸಿದೆ.
ಆದರೆ, ಕೊಲ್ಕತ್ತಾದಲ್ಲಿರುವ ಜಪಾನ್ ಕಾನ್ಸುಲೇಟ್ ಜನರಲ್ ನಕಮುರಾ ಯಟಾಕಾ ಶಿಂಜೋ ಅಬೆ ಪರವಾಗಿ ಈ ಗೌರವವನ್ನು ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಭಾರತದಲ್ಲಿರುವ ಜಪಾನ್ ರಾಯಭಾರಿ ಸತೋಷಿ ಸುಜುಕಿ ದೆಹಲಿಯಿಂದಲೇ ಪಾಲ್ಗೊಂಡು ಭಾಷಣ ಮಾಡಿದರು. ಸ್ವಾತಂತ್ರ್ಯ ಯೋಧ ಸುಭಾಷ್ ಚಂದ್ರ ಬೋಸ್ ಮೊಮ್ಮಗ, ನೇತಾಜಿ ರಿಸರ್ಚ್ ಬ್ಯೂರೋ ನಿರ್ದೇಶಕ ಸುಗತಾ ಬೋಸ್, ಅಬೆ ನೇತಾಜಿಯವರ ದೊಡ್ಡ ಅಭಿಮಾನಿ ಎಂದು ಬಣ್ಣಿಸಿದರು.