ವಿಂಬಲ್ಡನ್‌ನ ಮೊದಲ ಸುತ್ತಿನಲ್ಲೇ ಹೊರಬಿದ್ದ ಸೆರೆನಾ!

ಲಂಡನ್: ಜೂನ್ 29 (ಉದಯಕಾಲ ನ್ಯೂಸ್) 23 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತೆ ಅಮೆರಿಕದ ಸೆರೆನಾ ವಿಲಿಯಮ್ಸ್ ವಿಂಬಲ್ಡನ್‌ನ ಮೊದಲ ಸುತ್ತಿನಲ್ಲೇ ಫ್ರಾನ್ಸ್‌ನ ಹಾರ್ಮನಿ ಟಾನ್ ವಿರುದ್ಧ ಸೋತು ಹೊರಬಿದ್ದಿದ್ದಾರೆ. ಸೆಂಟರ್ ಕೋರ್ಟ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾನ್, 7-5, 1-6, 7-6(7) ಸೆಟ್ ಗಳಿಂದ ಸೆರೆನಾ ಅವರನ್ನು ಸೋಲಿಸಿದರು.

ಅಮೆರಿಕದ ಸೆರೆನಾ, ಕಳೆದ ವರ್ಷ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ಆರಂಭಿಕ ಸುತ್ತಿನಲ್ಲಿ ಗಾಯದ ಕಾರಣದಿಂದ ಹಿಂದೆ ಸರಿದಿದ್ದರು. ಸುಮಾರು ಒಂದು ವರ್ಷದ ನಂತರ, 40 ವರ್ಷದ ಸೆರೆನಾ ಲಂಡನ್‌ನ ಗ್ರಾಸ್-ಕೋರ್ಟ್‌ಗೆ ಮರಳಿದ್ದರು. ಸೋಲಿನ ನಡುವೆಯೂ ಸೆರೆನಾ ಗ್ರೌಂಡ್ ನಲ್ಲಿ ನಗೆ ಬೀರಿದರು.

Leave a Reply

Your email address will not be published. Required fields are marked *