ಸೆನ್ಸೆಕ್ಸ್ 75 ಅಂಕ ಕುಸಿತ

ಸೆನ್ಸೆಕ್ಸ್ 75 ಅಂಕ ಕುಸಿತ

ಮುಂಬೈ, ಜುಲೈ 8  – ಇಂಧನ, ಎಫ್‍ಎಂಸಿಜಿ, ಹಣಕಾಸು ಮತ್ತು ಆರೋಗ್ಯ ರಕ್ಷಣೆ ಷೇರುಗಳ ಮಾರಾಟ ಒತ್ತಡದಿಂದ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ 75 ಅಂಕ ಕುಸಿತ ಕಂಡು 52,979.68 ಕ್ಕೆ ಇಳಿದಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 27 ಅಂಕ ಇಳಿಕೆ ಕಂಡು 15,852.65 ಕ್ಕೆ ಕುಸಿದಿದೆ.
ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 53,103.03 ಮತ್ತು 52,954.23ರಲ್ಲಿತ್ತು.
ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 15,885.75 ಮತ್ತು 15,842.60ರಲ್ಲಿತ್ತು.
ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 15 ಏರಿಕೆ ಕಂಡರೆ, 15 ಕಂಪೆನಿಗಳ ಷೇರುಗಳು ಇಳಿಕೆ ಕಂಡಿವೆ.
ನಷ್ಟ ಕಂಡ ಷೇರುಗಳ ಪೈಕಿ ಹಿಂದ್ ಯೂನಿಲಿವರ್, ನೆಸ್ಲೆ ಇಂಡಿಯಾ, ಕೊಟಕ್ ಬ್ಯಾಂಕ್ , ಸನ್ ಫಾರ್ಮಾ ಮತ್ತು ಎಚ್‍ ಡಿಎಫ್‍ಸಿ ಬ್ಯಾಂಕ್ ಸೇರಿವೆ.
ಉಳಿದಂತೆ, ಬಜಾಜ್ ಆಟೋ, ಇಂಡಸ್ಇಂಡ್ ಬ್ಯಾಂಕ್, ಟೈಟಾನ್ ಮತ್ತು ಟೆಕ್ ಮಹೀಂದ್ರಾ ಏರಿಕೆ ದಾಖಲಿಸಿವೆ.

,

Leave a Reply

Your email address will not be published. Required fields are marked *