2005ರಲ್ಲಿ ಲಂಡನ್‌ನಲ್ಲಿ ಅಪಘಾತಗೊಂಡು ಮೆದುಳಿಗೆ ಏಟಾಗಿ ಒಳಗೆ ತೀವ್ರ ರಕ್ತಸ್ರಾವದ ಬಳಿಕ ಇಪ್ಪತ್ತು ವರ್ಷ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಲ್ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ ನಿಧನರಾಗಿದ್ದಾರೆ.
ಅವರ ಅಂತ್ಯಕ್ರಿಯೆ ಭಾನುವಾರ (ಇಂದು) ರಿಯಾದ್‌ನ ಇಮಾಮ್ ತುರ್ಕಿ ಬಿನ್ ಅಬ್ದುಲ್ಲಾ ಮಸೀದಿಯಲ್ಲಿ ಪ್ರಾರ್ಥನೆಯ ನಂತರ ನಡೆಯಲಿದೆಎಂದು ಅವರ ತಂದೆ ಪ್ರಿನ್ಸ್ ಖಾಲೀದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಮಾಹಿತಿ ನೀಡಿದ್ದಾರೆ.
2005ರಲ್ಲಿ ಲಂಡನ್ ಮಿಲಿಟರಿ ಕಾಲೇಜಿನಲ್ಲಿ ಓದುವಾಗ ಅವರಿಗೆ ಅಪಘಾತವಾಗಿತ್ತು. ಆಗ ಅವರಿಗೆ ೧೫ ವರ್ಷವಾಗಿತ್ತು. ಅಂದಿನಿಂದ 20 ವರ್ಷಕೋಮಾದಲ್ಲಿದ್ದರು. ಅಬ್ದುಲಜೀಜ್ ಅವರು ಮಗನ ಮೇಲೆ ಹೊಂದಿದ್ದ ಪ್ರೀತಿ ವಿಶ್ವದೆಲ್ಲೆಡೆ ಹಬ್ಬಿತ್ತು. ಅವನ ಸಾವು ಬದುಕು ದೇವರಿಚ್ಛೆ ಎಂದು ಅವರು ಹೇಳಿಕೊಂಡಿದ್ದರು.