ಉದಯೋನ್ಮುಖ ನಟ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಇನ್ನಿಲ್ಲ

ಉದಯೋನ್ಮುಖ ನಟ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಇನ್ನಿಲ್ಲ

ಬೆಂಗಳೂರು ಜೂನ್ 14 ಭೀಕರ ಅಪಘಾತದಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ನಟ ಸಂಚಾರಿ ವಿಜಯ್(38) ನಿಧನರಾಗಿದ್ದು, ಇನ್ನಷ್ಟೇ ಆಸ್ಪತ್ರೆಯಿಂದ ಅಧಿಕೃತ ಮಾಹಿತಿ ಹೊರ ಬರಬೇಕಿದೆ.

ಶನಿವಾರ ರಾತ್ರಿ ಈ ಅಪಘಾತ ಸಂಭವಿಸಿದ್ದು, ಕೂಡಲೇ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಗೆ ಕರೆ ತಂದಾಗಲೆ ಅವರ ಸ್ಥಿತಿ ಗಂಭೀರವಾಗಿತ್ತು,ಚಿಕಿತ್ಸೆಗೆ ಸ್ಪಂದಿಸದೆ ಇಂದು ಅವರು ನಿಧನರಾಗಿದ್ದಾರೆ.

ಆಸ್ಪತ್ರೆ ಮುಂದೆ ಮಾತಾನಾಡಿದ ವಿಜಯ್ ಸಹೋದರ ಸಿದ್ದೇಶ್ ,ಸಮಾಜದ ಒಳಿತಿಗಾಗಿ ಸಂಚಾರಿ ವಿಜಯ್ ದುಡಿಯುತ್ತಿದ್ದ ಹೀಗಾಗಿ ಅವನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದೇವೆ. ಅವನಿಲ್ಲ ಅನ್ನೋದನ್ನು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ. ವೈದ್ಯರು ಹೇಳುವ ಪ್ರಕಾರ ಅವರ ನಾರ್ಮಲ್ ಡೆತ್ ಆದರೆ ಅಂಗಾಂಗ ದಾನವನ್ನೂ ಮಾಡೋದ್ದಕ್ಕೆ ಆಗುವುದಿಲ್ಲ ಇದರಿಂದ ನಾಲ್ಕು ಜನರಿಗೆ ಸಹಾಯವಾಗಿ ಅಂತ ಬಯಸುತ್ತೇವೆ ಎಂದು ಭಾವುಕರಾದರು.

ಸಂಚಾರಿ ವಿಜಯ್ ನಿಧನಕ್ಕೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುಧೀಪ್, ಬಿಜೆಪಿ ಸಚಿವರಾದ ಸಿ.ಟಿ.ರವಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

, , ,

Leave a Reply

Your email address will not be published. Required fields are marked *