ಮೊದಲ ಸಲ ಬಯೋಪಿಕ್ ನಲ್ಲಿ ನಟಿಸಲು ಸಲ್ಮಾನ್ ಸಜ್ಜು : ಬ್ಲ್ಯಾಕ್ ಟೈಗರ್ ಪಾತ್ರದಲ್ಲಿ ಮಿಂಚಲಿದ್ದಾರೆ ಬ್ಯಾಡ್ ಬಾಯ್!

ಮೊದಲ ಸಲ ಬಯೋಪಿಕ್ ನಲ್ಲಿ ನಟಿಸಲು ಸಲ್ಮಾನ್ ಸಜ್ಜು : ಬ್ಲ್ಯಾಕ್ ಟೈಗರ್ ಪಾತ್ರದಲ್ಲಿ ಮಿಂಚಲಿದ್ದಾರೆ ಬ್ಯಾಡ್ ಬಾಯ್!

ಮುಂಬೈ, ಜೂನ್ 19 ವಿಭಿನ್ನ ಪಾತ್ರಗಳಲ್ಲಿ ಜನಮನ ರಂಜಿಸುತ್ತಿರುವ ಬಾಲಿವುಡ್ ನಟ, ಬ್ಯಾಡ್ ಬಾಯ್ ಸಲ್ಮಾನ್ ಖಾನ್, ಇದೇ ಮೊದಲ ಬಾರಿಗೆ ಬಯೋಪಿಕ್ ನಲ್ಲಿ ನಟಿಸಲು ಸಜ್ಜಾಗಿದ್ದಾರೆ.

ಚಿತ್ರರಂಗದಲ್ಲಿ 32 ವರ್ಷಗಳನ್ನು ಪೂರೈಸಿರುವ ಸಲ್ಮಾನ್ ತನ್ನ ವೃತ್ತಿ ಜೀವನದಲ್ಲಿ ಇದುವರೆಗೂ ಬಯೋಪಿಕ್ ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಸಲ್ಮಾನ್ ಖಾನ್ ನಟಿಸಲಿರುವ ಬಯೋಪಿಕ್ ಭಾರಿ ಕುತೂಹಲ ಮೂಡಿಸಿದೆ.

ಬ್ಲ್ಯಾಕ್ ಟೈಗರ್ ಎಂದೇ ಖ್ಯಾತಿ ಗಳಿಸಿದ್ದ ಭಾರತದ ಖ್ಯಾತ ಗೂಢಚಾರಿ ರವೀಂದ್ರ ಕೌಶಿಕ ಪಾತ್ರಕ್ಕೆ. ನಿರ್ದೇಶಕ ರಾಜ್ ಕುಮಾರ್ ಗುಪ್ತಾ, ರವೀಂದ್ರ ಕೌಶಿಕ್ ಜೀವನವನ್ನು ತೆರೆಮೇಲೆ ತರಲು ಸಿದ್ಧತೆ ನಡೆಸಿದ್ದು, ಸಲ್ಮಾನ್ ಖಾನ್ ಅವರನ್ನು ರವೀಂದ್ರ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ.

“ಇದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಲಿದೆ” ಎಂದು ಅವರು ಆಂಗ್ಲ ವೆಬ್ ಪೋರ್ಟಲ್ ವೊಂದಕ್ಕೆ ಮಾಹಿತಿ ನೀಡಿದ್ದಾರೆ.

ನಿರ್ದೇಶಕ ರಾಜ್ ಕುಮಾರ್ ಗುಪ್ತಾ ಕಳೆದ 5 ವರ್ಷಗಳಿಂದ ಅವರ ಜೀವನದ ಬಗ್ಗೆ ಸಂಶೋದನೆ ನಡೆಸುತ್ತಿದ್ದಾರೆ. ಅವರ ಸಾಧನೆ ಮತ್ತು ಪರಂಪರೆಗೆ ನ್ಯಾಯ ಒದಗಿಸುವ ಚಿತ್ರಕಥೆಯಲ್ಲಿ ನಟಿಸಲು ಲ್ಮಾನ್ ಖಾನ್ ಕೂಡ ಒಪ್ಪಿಕೊಂಡಿದ್ದಾರೆ. “ಇದು ಭಾರತೀಯ ಗುಪ್ತಚರ ಇತಿಹಾಸ ಅತ್ಯಂತ ವಿರೋಚಿತ ಮತ್ತು ಆಘಾತಕಾರಿ ಕಥೆಗಳಲ್ಲಿ ಒಂದಾಗಿದೆ” ವೆಬ್ ಪೋರ್ಟಲ್ ಗೆ ರಾಜ್ ಕುಮಾರ್ ಗುಪ್ತಾ ಬಹಿರಂಗ ಪಡಿಸಿದ್ದಾರೆ.

Leave a Reply

Your email address will not be published. Required fields are marked *