ಉಕ್ರೇನ್ ನಿರಾಶ್ರಿತರ ಮಕ್ಕಳಿಗಾಗಿ ನೊಬೆಲ್ ಪ್ರಶಸ್ತಿ ಹಾರಜಿಗಿಟ್ಟ ರಷ್ಯಾ ಪತ್ರಕರ್ತ

ನವದೆಹಲಿ: ಜೂನ್ 21 (ಉದಯಕಾಲ ನ್ಯೂಸ್) ರಷ್ಯಾದ ಸ್ವತಂತ್ರ ಪತ್ರಿಕೆಯಾದ ‘ನೊವಾಯಾ ಗೆಜೆಟಾ’ದ ಸಂಪಾದಕ ಮುರಾಟೋವ್ ಅವರು ತಮಗೆ ದೊರೆತಿರುವ ನೊಬೆಲ್ ಪ್ರಶಸ್ತಿಯನ್ನು ಹರಾಜಿಗೆ ಇರಿಸಿದ್ದಾರೆ.

ಯುದ್ಧದ ಭೀತಿಯಲ್ಲಿ ನಲುಗಿರುವ ಉಕ್ರೇನ್‌ನಲ್ಲಿ ಯುದ್ಧದಿಂದ ಸ್ಥಳಾಂತರಗೊಂಡ ಮಕ್ಕಳಿಗೆ ಸಹಾಯ ಮಾಡುವ ಇಚ್ಛೆಯಿಂದ  ಮುರಾಟೋವ್ ಅವರು ನೊಬೆಲ್ ಪ್ರಶಸ್ತಿಯನ್ನು ಹರಾಜು ಹಾಕಲು ಮುಂದಾಗಿದ್ದಾರೆ. ಸುಮಾರು ೫೦೦,೦೦೦ ಡಾಲರ್ ಬೆಲೆಬಾಳುವ ೨೩ ಕ್ಯಾರೆಟ್ ಬಂಗಾರದ ಪದಕವನ್ನು ಹರಾಜಿಗಿಟ್ಟು, ಅದರಿಂದ ಬಂದ ಹಣವನ್ನು ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಯುನಿಸೆಫ್ ಗೆ ನೀಡಲು ನಿರ್ಧರಿಸಿದ್ದಾರೆ.

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ಸರ್ಕಾರವನ್ನು ಮುರಾಟೋವ್ ಅವರ ನೊವಾಯಾ ಗೆಜೆಟಾ ಪತ್ರಿಕೆ ತೀವ್ರವಾಗಿ ಟೀಕಿಸಿತ್ತು. 1991 ರಲ್ಲಿ ನೊವಾಯಾ ಗೆಜೆಟಾವನ್ನು ಸ್ಥಾಪಿಸಿದ ಮುರಾಟೋವ್, 2021 ರ ಫಿಲಿಪೈನ್ಸ್‌ನ ಮಾರಿಯಾ ರೆಸ್ಸಾ ಅವರೊಂದಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದಿದ್ದರು.

ಆ ಬಹುಮಾನದ ಹಣದಲ್ಲಿ ಸುಮಾರು $500,000 ದತ್ತಿ ಸಂಸ್ಥೆಗಳಿಗೆ ದಾನ ಮಾಡಲು ವಾಗ್ದಾನ ಮಾಡಿದ ಮುರಾಟೋವ್, 2000 ರಿಂದ ಹತ್ಯೆಗೀಡಾದ ಆರು ನೊವಾಯಾ ಗೆಜೆಟಾ ಪತ್ರಕರ್ತರಿಗೆ ತಮ್ಮ ನೊಬೆಲ್ ಅನ್ನು ಅರ್ಪಿಸಿದರು.

Leave a Reply

Your email address will not be published. Required fields are marked *