ರಷ್ಯಾದ ಕೋವಿಡ್ 19 ವ್ಯಾಕ್ಸಿನ್ ಪ್ರಯೋಗಕ್ಕೆ ಒಳಪಡಲು ಸಿದ್ಧ: ಫಿಲಿಪೈನ್ಸ್ ಪ್ರಧಾನಿ

ಮಾಸ್ಕೋ: ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೋ ಡುಟರ್ಟೆ ಅವರು ರಷ್ಯಾ ಅಭಿವೃದ್ಧಿಪಡಿಸಿರುವ ಕೊರೋನಾ ವೈರಸ್ ನಿಯಂತ್ರಿಸುವ ಲಸಿಕೆಯನ್ನು ಪರೀಕ್ಷಿಸಲು ಸ್ವಯಂ ಸಿದ್ದರಿರುವುದಾಗಿ ಹೇಳಿದ್ದಾರೆ. ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಮತ್ತು ಉತ್ಪಾದನೆಗೆ ಮಾಸ್ಕೋದೊಂದಿಗೆ ಸಹಕರಿಸಲು ದೇಶ ಸಿದ್ಧವಿರುವುದಾಗಿ ತಿಳಿಸಿದ್ದಾರೆ.

“ಲಸಿಕೆಯನ್ನು ಸಾರ್ವಜನಿಕವಾಗಿ ಸ್ವೀಕರಿಸಲು ನಾನು ಸ್ವಯಂ ಸಿದ್ಧನಾಗಿದ್ದು, ಮೊದಲ ಪ್ರಯೋಗಕ್ಕೆ ಒಳಪಡುತ್ತೇನೆ: ಎಂದು ಡುಟರ್ಟೆ ಸೋಮವಾರ ಸಾರ್ವಜನಿಕರನ್ನುದ್ದೇಶಿಸಿ ಮಾಡಿರುವ ಭಾಷಣದಲ್ಲಿ ಹೇಳಿದ್ದಾರೆ.
ಕೊರೋನಾ ವೈರಸ್ ವಿರುದ್ಧ ಎಷ್ಟು ಲಸಿಕೆಗಳನ್ನು ಫಿಲಿಪೈನ್ಸ್‌ಗೆ ಸರಬರಾಜು ಮಾಡಲಾಗುವುದು ಮತ್ತು ಕ್ಲಿನಿಕಲ್ ಪ್ರಯೋಗಗಳು ಹೇಗೆ ನಡೆಯುತ್ತವೆ ಎಂಬುದರ ಕುರಿತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಚರ್ಚಿಸಲು ಡುಟರ್ಟೆ ಬಯಸಿದ್ದಾರೆ ಎನ್ನಲಾಗಿದೆ.
ಡುಟರ್ಟೆ ಘೋಷಣೆಯಾದ ಕೂಡಲೇ, ರಷ್ಯಾದ ನೇರ ಹೂಡಿಕೆ ನಿಧಿ ಫಿಲಿಪೈನ್ಸ್‌ನಲ್ಲಿ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
“ಫಿಲಿಪೈನ್ಸ್ ರಷ್ಯಾದೊಂದಿಗೆ ಕ್ಲಿನಿಕಲ್ ಪ್ರಯೋಗಗಳು, ಲಸಿಕೆ ಪೂರೈಕೆ ಮತ್ತು ಉತ್ಪಾದನೆ ಮತ್ತು ಇತರ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತವೆಂದು ಪರಿಗಣಿಸುವ ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಿದ್ಧತೆಯನ್ನು ವ್ಯಕ್ತಪಡಿಸುತ್ತದೆ” ಎಂದು ಅಧ್ಯಕ್ಷೀಯ ಆಡಳಿತವು ಫೇಸ್‌ಬುಕ್‌ನಲ್ಲಿ ತಿಳಿಸಿದೆ.
ಲಸಿಕೆ ಅಭಿವೃದ್ಧಿಗೆ ದೇಶವು ಇತರ ದೇಶಗಳ ಪಾಲುದಾರರೊಂದಿಗೆ ಸಹಕಾರ ನೀಡುತ್ತಿದೆ ಎಂದು ಫಿಲಿಪೈನ್ ಸರ್ಕಾರ ಹೇಳಿದೆ.

ರಷ್ಯಾದ ಮೊದಲ ಕೋವಿಡ್ ಲಸಿಕೆಯನ್ನು ಮಾಸ್ಕೋ ಮೂಲದ ಗಮಲೇಯಾ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

Leave a Reply

Your email address will not be published. Required fields are marked *